Monday, February 16, 2026
Flats for sale
Homeರಾಜ್ಯಬೆಂಗಳೂರು : ಇಂದಿನಿಂದ ಕೆಎಸ್‌ಆರ್‌ಟಿಸಿ ಲಗೇಜ್ ದರದಲ್ಲಿ ಹೆಚ್ಚಳ.

ಬೆಂಗಳೂರು : ಇಂದಿನಿಂದ ಕೆಎಸ್‌ಆರ್‌ಟಿಸಿ ಲಗೇಜ್ ದರದಲ್ಲಿ ಹೆಚ್ಚಳ.

ಬೆಂಗಳೂರು : ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ರಹಿತವಾಗಿ ಸಾಗಿಸುವ ಲಗೇಜ್‌ಗಳ ದರ ಹೆಚ್ಚಳವಾಗಲಿದೆ. ಈ ಕುರಿತು
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಆದೇಶ ನೀಡಿದ್ದಾರೆ.

ಈ ಹಿಂದೆ 2021ರಲ್ಲಿ ಕೆಎಸ್ ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ದರ ಹೆಚ್ಚಳವಾಗಿತ್ತು ಆದರೆ ಲಗೇಜ್‌ಗಳಿಗೆ ದರ ಪರಿಷ್ಕೃತವಾಗಿರಲಿಲ್ಲ. ಇದೀಗ ಅದರ ದರವನ್ನು ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಡಿಸೇಲ್, ಸಿಬ್ಬಂದಿ ಸೇರಿದಂತೆ ಇತರೆ ಖರ್ಚುಗಳು ಹೆಚ್ಚಿಗೆ ಆಗಿವೆ. ಶಕ್ತಿ ಯೋಜನೆಯಿಂದ ಪ್ರತಿದಿನ ಲಕ್ಷಾಂತರ ಮಹಿಳೆಯರು ಬಸ್ಸಿನಲ್ಲಿ ಸಂಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಗೇಜ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ತನ್ನ ತೀರ್ಮಾನವನ್ನು ಸಮರ್ಥನೆ ಮಾಡಿಕೊಂಡಿದೆ. ಶಕ್ತಿಯೋಜನೆ ಎಂದು ಒಂದುಕೈಗೆ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular