Monday, February 16, 2026
Flats for sale
Homeಜಿಲ್ಲೆಬೆಳ್ತಂಗಡಿ : ಲ್ಯಾಲ ಗ್ರಾಮದ ಗಡಿ ಪ್ರದೇಶ ಅಗಳಿಯ ಹೇನಡ್ಕ ಪರಿಸರದಲ್ಲಿ ಚಿರತೆ ಓಡಾಟ,ಆತಂಕದಲ್ಲಿ ಸ್ಥಳೀಯರು.

ಬೆಳ್ತಂಗಡಿ : ಲ್ಯಾಲ ಗ್ರಾಮದ ಗಡಿ ಪ್ರದೇಶ ಅಗಳಿಯ ಹೇನಡ್ಕ ಪರಿಸರದಲ್ಲಿ ಚಿರತೆ ಓಡಾಟ,ಆತಂಕದಲ್ಲಿ ಸ್ಥಳೀಯರು.

ಬೆಳ್ತಂಗಡಿ : ತಾಲೂಕಿನ ನಡ ಹಾಗೂ ಲ್ಯಾಲ ಗ್ರಾಮದ ಗಡಿ ಪ್ರದೇಶವಾದ ಅಗಳಿಯ ಹೇನಡ್ಕ ಪರಿಸರದಲ್ಲಿ ಶನಿವಾರ ರಾತ್ರಿ ಚಿರತೆಯ ಓಡಾಟ ಪತ್ತೆಯಾಗಿದ್ದು, ಅಲ್ಲಲ್ಲಿ ಚಿರತೆಯ ಹೆಜ್ಜೆಗುರುತು ಕಂಡುಬಂದಿದೆ.

ಈ ಭಾಗದ ರಸ್ತೆಯಲ್ಲಿ ಒಂದು ದೊಡ್ಡ ಚಿರತೆ ಹಾಗೂ ಮರಿ ಚಿರತೆ ಸಂಚರಿಸಿರುವ ಹೆಜ್ಜೆಗಳು ಕಂಡು ಬಂದಿವೆ. ಅರಣ್ಯ ಇಲಾಖೆಯ ಸಿಬಂದಿ ರವಿವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಪರಿಸರದಲ್ಲಿ ಚಿರತೆಗಳು ಸಂಚರಿಸುತ್ತಿರುವುದು ಸಾಮಾನ್ಯವಾಗಿದ್ದು ಸ್ಥಳೀಯರು ಸಂಜೆಯ ಬಳಿಕ ಓಡಾಡಲು ಹೆದರುತ್ತಿದ್ದಾರಲ್ಲದೇ ಸಾಕುನಾಯಿಗಳನ್ನು ಗೂಡಿನಿಂದ ಹೊರಗೆ ಬಿಡಲು ಆತಂಕ ಪಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular