Saturday, February 14, 2026
Flats for sale
HomeUncategorizedಮಂಗಳೂರು ; ಬಿಲ್ಡರ್, ಬಿಜೆಪಿ ಮುಖಂಡನ ಮನೆಗೆ ನುಗ್ಗಿ ದಾಂಧಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್,ಜಿತೇಂದ್ರ ಕೊಟ್ಟಾರಿ...

ಮಂಗಳೂರು ; ಬಿಲ್ಡರ್, ಬಿಜೆಪಿ ಮುಖಂಡನ ಮನೆಗೆ ನುಗ್ಗಿ ದಾಂಧಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್,ಜಿತೇಂದ್ರ ಕೊಟ್ಟಾರಿ ವಿರುದ್ದ ಎಫ್ಐಆರ್ ದಾಖಲು.

ಮಂಗಳೂರು : 2024ರ ಪ್ರಕರಣ ಸಂಬಂಧಿಸಿ ಪ್ರತಿಷ್ಠಿತ ಬಿಲ್ಡರ್, ಬಿಜೆಪಿ ಮುಖಂಡನ ವಿರುದ್ದವೇ ಮಂಗಳೂರು ಕೋರ್ಟ್ ಆದೇಶದಂತೆ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ವಿರುದ್ದ ಎಫ್ಐಆರ್ ದಾಖಲಾಗಿದೆ.

2024ರ ಅಕ್ಟೋಬರ್ ನಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಕೊಡಿಯಾಲ್ ಬೈಲ್ ನ ಬಿಲ್ಡರ್ ಜಿತೇಂದ್ರ ಮನೆಗೆ ನುಗ್ಗಿ ಯುವಕರಿಬ್ಬರು ದಾಂಧಲೆ ಮಾಡಿದ್ದ ಆರೋಪ ಕೇಳಿಬಂದಿತ್ತು. ದಾಂಧಲೆ ನಡೆಸಿದ್ದ ಇಬ್ಬರು ಯುವಕರನ್ನು ಬರ್ಕೆ ಪೊಲೀಸರು ಬಂಧಿಸಿದ್ದರು. ಎನ್ ಎಸ್ ಯುಐ ಕಾರ್ಯಕರ್ತರಾದ ತನುಷ್ ಶೆಟ್ಟಿ ಹಾಗೂ ಅಂಕಿತ್ ಶೆಟ್ಟಿ ಬಂಧಿತ ಅರೋಪಿಗಳು.

ತನುಷ್ ಶೆಟ್ಟಿ ಹಾಗೂ ಅಂಕಿತ್ ಇದ್ದ ಕಾರನ್ನು ಜಿತೇಂದ್ರ ಕೊಟ್ಟಾರಿ ಓವರ್ ಟೇಕ್ ಮಾಡಿದ್ದ ಆರೋಪದ ಹಿನ್ನೆಲೆ ಇದೇ ಕೋಪದಲ್ಲಿ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಗಲಾಟೆ ಮಾಡಲಾಗಿತ್ತು ಘಟನೆ ಸಂಬಂಧಿಸಿದಂತೆ ಬರ್ಕೆ ಠಾಣೆಗೆ ದೂರು ಜಿತೇಂದ್ರ ಕೊಟ್ಟಾರಿ ನೀಡಿದ್ದನ್ನು.ದೂರು ಪಡೆದು ಎಫ್ಐಆರ್ ದಾಖಲಿಸಿ ಇಬ್ಬರು ಆರೋಪಿಗಳ ಪೊಲೀಸರು ಬಂಧಿಸಿದ್ದರು.ಇದೀಗ ಒಂದೂವರೆ ವರ್ಷದ ಬಳಿಕ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ವಿರುದ್ದವೂ ಎಫ್ಐಆರ್ ದಾಖಲಾಗಿದೆ.

ಜಿತೇಂದ್ರ ಕೊಟ್ಟಾರಿ ವಿರುದ್ದ ಕೋರ್ಟ್ ನಲ್ಲಿ ತನುಷ್ ಶೆಟ್ಟಿ ಖಾಸಗಿ ದೂರು ದಾಖಲಿಸಿದ್ದು ಜಿತೇಂದ್ರ ಕೊಟ್ಟಾರಿ ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದನೆಂದು ಮಂಗಳೂರಿನ ಆರನೇ ಜೆ.ಎಂ.ಎಫ್.ಸಿ ಕೋರ್ಟ್ ನಿಂದ ಪೊಲೀಸರಿಗೆ ಎಫ್ಐಆರ್ ದಾಖಲಿಸಲು ಆದೇಶ ಹೊರಡಿಸಿದೆ.ಇದೀಗ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ 115(2), 352, 351(2), 351(3), 3(5), INDIAN ARMS ACT, 1959 ಅಡಿ ಜಿತೇಂದ್ರ ಕೊಟ್ಟಾರಿ ವಿರುದ್ದ ಎಫ್ಐಆರ್ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular