Wednesday, February 11, 2026
Flats for sale
Homeಜಿಲ್ಲೆಮಂಗಳೂರು : ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತು ನಾರುತ್ತಿರುವ ಪಲ್ಗುಣಿ ನದಿಗೆ ಸೇರುವ ಹಳ್ಳದ ನೀರು,ಹಲವು...

ಮಂಗಳೂರು : ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತು ನಾರುತ್ತಿರುವ ಪಲ್ಗುಣಿ ನದಿಗೆ ಸೇರುವ ಹಳ್ಳದ ನೀರು,ಹಲವು ಜಲಚರಗಳ ಮಾರಣಹೋಮ,ಯಾವುದೇ ಕ್ರಮಕೈಗೊಳ್ಳದ ಜಿಲ್ಲಾಡಳಿತ.

ಮಂಗಳೂರು ; ಮಂಗಳೂರಿನ ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಲ್ಗುಣಿಗೆ ನದಿಗೆ ಸೇರುವ ಹಳ್ಳದಲ್ಲಿ ನೀರು ಕೊಳೆತು ನಾರುತ್ತಿದ್ದು.ಕಂಪನಿಯ ಮಾಲಿನ್ಯ ನೀರು ಸೇರಿದ ಪರಿಣಾಮ ಮೀನುಗಳ ಮಾರಣ ಹೋಮವಾಗಿದೆ. ಪಲ್ಗುಣಿಗೆ ನದಿಗೆ ಸೇರುವ ಹಳ್ಳ ಕಪ್ಪುಬಣ್ಣಕ್ಕೆ ತಿರುಗಿದ್ದು ಕೆಲವೆಡೆ ನೀರಿನಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ.

ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಹಳ್ಳದಲ್ಲಿ ಸಂಪೂರ್ಣವಾಗಿ ಕಲುಷಿತಗೊಂಡಿವುದರಿಂದ ನೀರು ಕೊಳೆತು ನಾರುತ್ತಿದೆ. ಸಾಕಷ್ಟು ಮೀನುಗಳು ಸತ್ತು ಹೋಗಿವೆ. ಕಳೆದ ಒಂದು ವಾರದಿಂದ ಈ ಸ್ಥಿತಿ ಇದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಭಾಗದ ಕೈಗಾರಿಕೆಗಳು ಹಲವು ವರ್ಷಗಳಿಂದ ತಮ್ಮ ಕೈಗಾರಿಕಾ ಮಾಲಿನ್ಯವನ್ನು ಆನಧಿಕೃತವಾಗಿ ಪಲ್ಗುಣಿಯನ್ನು ಸೇರುವ ಹಲವು ಹಳ್ಳಗಳಿಗೆ ನೇರವಾಗಿ ಹರಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಂಪನಿಗಳ ಕಲುಷಿತ ನೀರಿನಿಂದಾಗಿ ಹಳ್ಳ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಆಸುಪಾಸಿನ ಬಾವಿಗಳು ಕಲುಷಿತಗೊಂಡಿದೆ .ಹಳ್ಳದ ಮೀನುಗಳನ್ನ ಹಿಡಿದು ಜೀವನ ಸಾಗಿಸಿಕೊಳ್ಳುತ್ತಿದ್ದರು. ಖಾಸಗಿ ಕಂಪನಿಗಳ ನೀರು ನದಿಗೆ ಸೇರಿವುದರಿಂದ ಮೀನುಗಳು ಮಾರಣಹೋಮ ಕಂಡಿದೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಸೇರಿದಂತೆ ಸ್ಥಳೀಯರು ಅಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾರ್ಪೊರೆಟರ್ ದಯಾನಂದ ಶೆಟ್ಟಿ ಈ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರ, ಶಾಲೆಗಳು ಕಾರ್ಯಾಚರಿಸುತ್ತಿದೆ. ಇದರಿಂದಾಗಿ ಕೊಳೆತ ನೀರಿನಿಂದಾಗಿ ವಾಸನೆ ಬರುವುದರಿಂದ ಮಕ್ಕಳ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular