ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಪ್ರಕರಣಕ್ಕೆಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ನಿನ್ನೆ ನಡೆದಿದ್ದ ಕಿಡ್ನಾಪ್ ಯತ್ನ ಕೇಸ್ ಇದೀಗ ಮೇಜರ್ ಟ್ವಿಸ್ಟ್ ಪಡೆದುಕೊಂಡಿದೆ.
ನಿನ್ನೆ ಈ ಘಟನೆ ನಡೆದ ಬಳಿಕ ಮಂಗಳೂರಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳೀಯ ಶಾಸಕ ಹರೀಶ್ ಪೂಂಜಾ ಕೂಡ ದೌಡಾಯಿಸಿ ಬಾಲಕಿಯನ್ನು ಭೇಟಿ ಮಾಡಿದ್ದರು ಆದರೆ ಪೊಲೀಸರು ನಡೆಸಿದ ಎಲ್ಲ ಆಯಾಮದ ತನಿಖೆಯಿಂದ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲವೆಂದು ತಿಳಿದುಬಂದಿದೆ.ತನಿಖೆ ಮೇಲೆ ತನಿಖೆ ಮಾಡಿದ ಪೊಲೀಸರಿಂದ ಡ್ರಾಮ ಬಯಲಿಗೆ ಎಳೆದಿದ್ದಾರೆ. ಮಂಗಳೂರು ಕಾಲೇಜಿಗೆ ಸೇರಿಸಿಕೊಳ್ಳಲು ಕಿಡ್ನಾಪ್ ಹೈಡ್ರಾಮ ಕ್ರಿಯೇಟ್ ಮಾಡಿದಾಗಿ ಪೊಲೀಸರ ಬಳಿ ಬಾಲಕಿನಿಜ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ.
ಯುವತಿಗೆ ಮಂಗಳೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಮನಸಿದ್ದ ಕಾರಣ ಪೋಷಕರು ಕಿಡ್ನಾಪ್ ಡ್ರಾಮ ಮಾಡಿದ್ರೆ ಮಂಗಳೂರಿನ ಪಿಯುಸಿ ಕಾಲೇಜಿಗೆ ಸೇರಿಸುತ್ತಾರೆ ಅನ್ನೊ ಪ್ಲಾನ್ ನಿಂದ ಈ ಖತರ್ನಾಕ್ ಐಡಿಯಾ ಬಳಸಿದ್ದಾಳೆ.ಈ ಡ್ರಾಮಾ ಮಾಡಲು ಸ್ಕೂಟಿಯನ್ನು ನಿಲ್ಲಿಸಿ ಬ್ಲೇಡ್ ನಿಂದ ಕೈ ಕುಯ್ದುಕೊಂಡು ಬ್ಯಾಗ್ ನಲ್ಲಿರೋ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿ ಬಳಿಕ ಶಾಲಾ ಬ್ಯಾಗ್ ನ್ನು ದಾರಿಯಲ್ಲೇ ಬಿಸಾಕಿದ್ದಾಳೆ.ಈ ಬಗ್ಗೆ ಪೊಲೀಸರು ಇಡೀ ದಿನ ಕಾರ್ಯಾಚರಣೆ ನಡೆಸಿದ್ದು ಯಾವುದೇ ಕುರುಹು ಸಿಗದ ಹಿನ್ನೆಲೆ ಬಾಲಕಿಯನ್ನು ತೀವ್ರ ತನಿಖೆ ನಡೆಸಿದ ಮೇಲೆ ತನ್ನ ನಾಟಕವನ್ನು ತಿಳಿಸಿದ್ದಾಳೆಂದು ಮಾಹಿತಿ ದೊರೆತಿದೆ.


