ಬರೋಡ : ಭಾರತೀಯರ ಕ್ರಿಕೆಟ್ನ ಪ್ರಮುಖ ಆಟಗಾರ್ತಿಯರಷ್ಟೇ ಅಲ್ಲದೇ, ವೈಯಕ್ತಿಕವಾಗಿಯೂ ಸ್ನೇಹಿತೆಯರಾಗಿರುವ ಆರ್ಸಿಬಿ ನಾಯಕಿ ಸ್ಮೃತಿ
ಮಂಧಾನ ಹಾಗೂ ಜೆಮಿಮಾ ರೋಡ್ರಿಗ್ಸ್ ಡಬ್ಲ್ಯೂಪಿಎಲ್ ಫೈನಲ್ನಲ್ಲಿ ಟ್ರೋಫಿಗಾಗಿ ಕೊನೆಗಾಗಿ ಕಾದಾಡುವ ಸನ್ನಿವೇಶ ಏರ್ಪಟಾಗಿತ್ತು. ಆದ್ರೆ, ಆರ್ಸಿಬಿಗೆ ಟ್ರೋಫಿ ಎತ್ತಿ ಹಿಡಿಯುವ ಅದೃಷ್ಟವಿತ್ತು. ಹಾಗಾಗಿಯೇ, ಕೊನೆ ಓವರ್ನಲ್ಲಿ ರೋಚಕ ಗೆಲುವು ಕಂಡು ಸಂಭ್ರಮದಲ್ಲಿ ತೇಲಾಡಿದೆ.
ಪಂದ್ಯದಾರAಭದಲ್ಲಿ ಟಾಸ್ ಗೆದ್ದಿದ್ದು ಆರ್ಸಿಬಿಯಾದರೆ, ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದು ಮಾತ್ರ ಡೆಲ್ಲಿ ಕ್ಯಾಪಿಟಲ್ಸ್. ಸಿಡಿಲಬ್ಬರದ
ಬ್ಯಾಟಿಂಗ್ ಪಡೆ ಹೊಂದಿದ್ದ ಡೆಲ್ಲಿ ತಂಡದ ಆರAಭಿಕರಾದ ಶಫಾಲಿ ವರ್ಮಾ, ಲಿಜೆಲ್ಲಿ ಲೀ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಬ್ಯಾಟಿಂಗ್ ಪಿಚ್ನಲ್ಲಿ ಆರ್ಸಿಬಿ ಬೌಲರ್ಸ್ ಆರಂಭದಲ್ಲಿ ಕಡಿವಾಣ ಹಾಕಿದರು. ಆದ್ರೆ, 20 ರನ್ಗಳಿಸಿದ್ದ ಶಫಾಲಿ ಮೊದಲಿಗರಾಗಿ ಅರುಂದತಿ
ರೆಡ್ಡಿ ಬೌಲಿಂಗ್ನಲ್ಲಿ ಹೊರ ನಡೆದರೋ, ಆರ್ಸಿಬಿ ಪಾಳಯದಲ್ಲಿ ಮಿಂಚಿನ ಹುರುಪು ಬಂದಿತ್ತು. ಇದೇ ಹಾದಿಯಲ್ಲಿ ಲಿಜೆಲ್ಲೆ ಲೀ ಅವರನ್ನು ಕೂಡ
ಔಟ್ ಮಾಡಿದರು. ಆದರೆ, ಇಲ್ಲಿಂದ ನಾಯಕಿ ಜೆಮಿಮಾ ರೋಡ್ರಿಗ್ಸ್ ಹಾಗೂ ಲೌರಾ ವಾಲ್ವರ್ಡ್ಟ್ರ ಜುಗಲ್ಬಂದಿ ಆರಂಭವಾಯಿತು. ತಂಡದ ಪರ
ಬೃಹತ್ ಮೊತ್ತ ಪೇರಿಸುವ ಜವಬ್ದಾರಿ ಜೆಮಿಮಾ ಮೇಲಿತ್ತು. ಅರ್ಧಶತಕ ಗಳಿಸಿದ ಅವರು ಅನಗತ್ಯ ರನ್ ಕದಿಯಲು ಹೋಗಿ ರನೌಟ್ಗೆ ಬಲಿಯಾದರು.
ಇಲ್ಲಿಂದ ಪಂದ್ಯ ತಿರುವು ಪಡೆದುಕೊಂಡಿತು.
ಲೌರಾ ವಾಲ್ವರ್ಡ್ಟ್ 44 ರನ್ಗಳಿಸಿ ಓಟಾದರು.ಆದ್ರೆ, ತಂಡಕ್ಕೆ ಆಸರೆಯಾಗಿದ್ದು ಸ್ಲಾಗ್ ಓವರ್ಗಳಲ್ಲಿ ಚಿನ್ನೆಲೆ ಹೆನ್ರಿ. 15 ಎಸೆತಗಳಲ್ಲಿ ಅಜೇಯ 35 ರನ್. ಇದರಿಂದ, ಅAತಿಮವಾಗಿ ಡೆಲ್ಲಿ ಇನ್ನೂರರ ಗಡಿ ದಾಟಿತು. ಸ್ಲಾಗ್ ಓವರ್ಸ್ನಲ್ಲಿ ಗೇಮ್ ಚೇಂಜ್: 203 ರನ್ ಬೆನ್ನಟ್ಟಿದ ಆರ್ಸಿಬಿಗೆ ಗ್ರೇಸ್ ಹ್ಯಾರೀಸ್ನ ವಿಕೆಟ್ ಆಘಾತ ನೀಡಿತು. ಆದ್ರೆ, 2ನೇ ವಿಕೆಟ್ಗೆ ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಈ ಜೋಡಿ ಶತಕದ ಜೊತೆಯಾಟ ಆಡಿ, ಡೆಲ್ಲಿ ತಂಡಕ್ಕೆ ನಿರಾಸೆ ಮೂಡಿಸಿದರು. ಆದ್ರೆ, 2ನೇ ಪವರ್ಪ್ಲೇನಲ್ಲಿ ಪಂದ್ಯ ರೋಚಕ ತಿರುವು ಪಡೆಯಿತು. 79 ರನ್ ಗಳಿಸಿದ್ದ ಜಾರ್ಜಿಯಾ ವಾಲ್ರ ಕ್ಯಾಚ್ನಿಂದ ಹಿಡಿದು 87 ರನ್ಗಳಿಸಿ ಬೌಲ್ಡ್ ಆದ ಸ್ಮೃತಿ ಮಂಧಾನದ ವಿಕೆಟ್ವರೆಗೂ ಪಂದ್ಯದ ಗೆಲುವು ಅನಿರೀಕ್ಷಿತವಾಗಿತ್ತು. ಕೊನೆ ಓವರ್ನಲ್ಲಿ 10 ರನ್ಗಳಿಸಬೇಕಿದ್ದ ಆರ್ಸಿಬಿಗೆ ನಡಿನೇ ಡಿ ಕ್ಲಾರ್ಕ್ ಹಾಗೂ ರಾಧಾ ಯಾದವ್ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅದರಲ್ಲೂ ರಾಧಾ ಯಾದವ್ ಶ್ರೀಚರಣಿಗೆ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಬಾರಿಸಿ ಗೆಲುವು ಖಚಿತ ಪಡಿಸಿದರು.


