Tuesday, February 10, 2026
Flats for sale
Homeಜಿಲ್ಲೆಪುತ್ತೂರು : ಪುತ್ತೂರು ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಸ್ಲಿಂ ನಾಯಕರ ಹೆಸರು...

ಪುತ್ತೂರು : ಪುತ್ತೂರು ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಸ್ಲಿಂ ನಾಯಕರ ಹೆಸರು ಕೈ ಬಿಟ್ಟ ಕಾಂಗ್ರೆಸ್, ಕರಾವಳಿಯ ಮುಸ್ಲಿಂ ಕಾರ್ಯಕರ್ತರು ಆಕ್ರೋಶ.

ಪುತ್ತೂರು : ಕರಾವಳಿಯಲ್ಲಿ ಕಾಂಗ್ರೆಸ್ ವಿರುದ್ದ ಮತ್ತೆ ಮುಸಲ್ಮಾನರ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸ್ಲಿಂ ನಾಯಕರಿಗೆ ‘ಕೈ’ ಕೊಟ್ಟ ಹಿನ್ನಲೆ ಪುತ್ತೂರು ಕಾಂಗ್ರೆಸ್ ಭವನ ಶಿಲಾನ್ಯಾಸಕ್ಕೆ ಕಾಂಗ್ರೆಸ್ ಮುಸ್ಲಿಂ ಮುಖಂಡರಿಗೆ ಕೋಕ್ ನೀಡಲಾಗಿದೆ ಎಂದು ಆಕ್ರೋಶಹೊರಹಾಕಿದ್ದಾರೆ.

ಕರಾವಳಿ ಕಾಂಗ್ರೆಸ್ ವಿರುದ್ದ ಮತ್ತೆ ಮುಸ್ಲಿಂ ನಾಯಕರ ಆಕ್ರೋಶ ಭುಗಿಲೆದ್ದಿದ್ದಾರೆ .ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುತುವರ್ಜಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಾಂಗ್ರೆಸ್ ಭವನ ವನ್ನು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಶಿಲಾನ್ಯಾಸ ಕಾರ್ಯಕ್ರಮ ನಡೆಸಲಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಸ್ಲಿಂ ನಾಯಕರ ಹೆಸರು ಕೈ ಬಿಟ್ಟಿದ್ದು ಈ ಹಿನ್ನೆಲೆ ಪುತ್ತೂರು ಸೇರಿ ದ.ಕ ಜಿಲ್ಲೆಯ ಯಾವುದೇ ಮುಸ್ಲಿಂ ನಾಯಕನ ಹೆಸರು ಮುದ್ರಿಸದ ಹಿನ್ನೆಲೆ ಭಾರೀ ಅವಮಾನವಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಕಾಂಗ್ರೆಸ್ ವಿರುದ್ದ ಮುಸ್ಲಿಂ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.

ಈ ಹಿಂದೆ ಬಂಟ್ವಾಳದ ರೆಹಮಾನ್ ಹತ್ಯೆ ವೇಳೆ ಕಾಂಗ್ರೆಸ್ ವಿರುದ್ದ ಕರಾವಳಿ ಮುಸ್ಲಿಂ ಕಾರ್ಯಕರ್ತರು ಸಿಡಿದೆದ್ದಿದ್ದು ಆ ಸಮಯದಲ್ಲಿ ಸ್ವತಃ ಸಿದ್ದರಾಮಯ್ಯ ಹಾಗೂ ಡಿಕೆಶಿಗೂ ಮುಸ್ಲಿಂ ಕಾರ್ಯಕರ್ತರ ಆಕ್ರೋಶ ಮುಜುಗರ ತಂದಿತ್ತು. ಇದೀಗ ಪುತ್ತೂರಿನಲ್ಲಿ ಮುಸ್ಲಿಂ ನಾಯಕರ ಕಡೆಗಣನೆಗೆ ಭಾರೀ ಆಕ್ರೋಶ ಹೊರಹಾಕಿದ್ದು ಭಾರೀ ಅಸಮಾಧಾನದ ಬೆನ್ನಲ್ಲೇ ತೇಪೆ ಹಚ್ಚಲು ಜಿಲ್ಲಾ ಕಾಂಗ್ರೆಸ್ ಪ್ರಯತ್ನಿಸಿದೆ.ಪುತ್ತೂರು ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪತ್ರಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹೆಸರು ಹಾಕಿ ಮರುಮುದ್ರಣ ಮಾಡಿದ್ದೂ ಪುತ್ತೂರು ಹಾಗೂ ದ.ಕ‌ ಜಿಲ್ಲೆಯ ಹಲವು ಮುಸ್ಲಿಂ ನಾಯಕರ ಕಡೆಗಣನೆ ಆರೋಪಕೇಳಿಬಂದಿದೆ.

ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ವಿರುದ್ದವೂ ಕೆಲವರು ಆಕ್ರೋಶ ಹೊರಹಾಕಿದ್ದು ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್‌ ಆಲಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ನವಾಝ್‌,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಮಹಮ್ಮದ್‌, ನಿಗಮದ ಅಧ್ಯಕ್ಷ ಗಫೂರ್, ಟಿ.ಎಂ.ಶಹೀದ್‌ ಹೆಸರು ಹಾಕದ್ದಕ್ಕೆ ಕಿಡಿಕಾರಿದ್ದಾರೆ.ಹಾಗೂ ಕೆಲ ನಾಯಕರು ಇಂದು ನಡೆಯುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ನಡೆಯುವ ಸಾಧ್ಯವಿದೆ ಎಂಬ ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular