ಮಂಗಳೂರು : ನಗರ ಶಸ್ತ್ರಾಸ್ತ ಪಡೆಯ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರಹಿಸುತ್ತಿದ್ದ ಮಾರುತಿ ಲಮಾಣಿ ಯವರು ತೀವ್ರ ರಕ್ತದೊತ್ತಡದಿಂದ ಮೆದುಳಿನ ರಕ್ತಸ್ರಾವ ಉಂಟಾಗಿ ಮೃತ ಪಟ್ಟಿದ್ದಾರೆ.
ಮೂಲತಃ ಹಾವೇರಿ ಮೂಲದವರಾಗಿದ್ದ ಅವರು ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ನಗರ ಶಸ್ತ್ರಾಸ್ತ ಪಡೆಯ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು,ಕಳೆದ 2 ದಿನಗಳ ಹಿಂದೆ ಡ್ಯೂಟಿ ಮುಗಿಸಿ ಮನೆಗೆ ಹೋಗಿದ್ದು ತಮ್ಮ ಇಬ್ಬರು ಮುದ್ದಿನ ಮಕ್ಕಳ ಜೊತೆ ಆಟವಾಡುತ್ತಿರುವಾಗ ಇದ್ದಕಿದ್ದಂತೆ ಮೂರ್ಛೆ ತಪ್ಪಿ ಹೋಗಿದ್ದಾರೆ.ಬಳಿಕ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಮೆದುಳಿನ ರಕ್ತಸ್ರಾವವಾಗಿದೆ ಎಂದು ತಿಳಿಸಿದ್ದರು,ತೀವ್ರ ನೀಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ,ಅವರು ತಮ್ಮ ಇಬ್ಬರು ಮಕ್ಕಳು,ಮಡದಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


