ಮಂಗಳೂರು : ದಕ್ಷಿಣಕನ್ನಡ ಭಾಗದಲ್ಲಿ ಪಿಳಿಕುಳ ನಿಸರ್ಗಧಾಮವೆಂದರೆ ಮಕ್ಕಳ ಅಚ್ಚುಮೆಚ್ಚಿನ ತಾಣ ಆದರೆ ಅಧಿಕಾರಿಗಳ ನಿರ್ಲಕ್ಷ್ಯಹಾಗೂ ಬೇಜವಾಬ್ದಾರಿಯಿಂದ ಕರಾವಳಿಯ ಪ್ರಸಿದ್ಧ ಮೃಗಾಲಯದ ಅವ್ಯವವಸ್ಥೆ ಕಂಡು ಹೈ ಕೋರ್ಟ್ ನ್ಯಾಯಾಧೀಶರೇ ಶಾಕ್ ಹಾಕಿದ್ದು ತಕ್ಷಣ ಬಂದ್ ಮಾಡಿ ಎಂದು ಹೈಕೋರ್ಟ್ ನ್ಯಾಯಾಧಿಶರು ಸೂಚನೆ ನೀಡಿದ್ದಾರೆ.
ಇದೀಗ ಅಧಿಕಾರಿಗಳ ಬೇಜಾಬ್ದಾರಿಯಿಂದ ಮಂಗಳೂರಿನ ಪಿಲಿಕುಳ ಮೃಗಾಲಯಕ್ಕೆ ಸಂಕಷ್ಟ ಸುರುವಾಗಿದ್ದು ಮೃಗಾಲಯಕ್ಕೆ ಬೀಗ ಹಾಕಲು ಸೂಚಿಸಿದ್ದಾರೆ.
ಪಿಳಿಕುಲ ಮೃಗಾಲಯದಲ್ಲಿರುವ ಪ್ರಾಣಿಗಳ ಫೋಟೋ ನೋಡಿ ಹೈಕೋರ್ಟ್ ನ್ಯಾಯಧೀಶರು ಗರಂ ಹಾಗಿದ್ದು ಉದ್ಯಾನವನದ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಹೈಕೋರ್ಟ್ ಅಕ್ರೋಶ ಹೊರಹಾಕಿದೆ.”ಪ್ರಾಣಿಗಳ ಸ್ಥಿತಿ ಹೀಗಿದ್ದರೆ ತಕ್ಷಣ ಪಾರ್ಕ್ ಬಂದ್ ಮಾಡಿ” ಎಂದು ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ವನ್ಯಜೀವಿ ಸಂರಕ್ಷಕ ಭುವನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳ ಫೋಟೋ ನೋಡಿ ನ್ಯಾಯಪೀಠ ಅಸಮಾಧಾನಗೊಂಡಿದ್ದು ತುಕ್ಕು ಹಿಡಿದ ಪಂಜರಗಳು, ಅಶುಚಿಯಾದ ಪರಿಸರ ಹಾಗೂ ಪ್ರಾಣಿಗಳಿಗೆ ಸರಿಯಾದ ಭದ್ರತೆ ಇಲ್ಲದ ಬಗ್ಗೆ ಖಡಕ್ ಸೂಚನೆ ನೀಡಿದೆ.
2025ರ ಡಿಸೆಂಬರ್ನಲ್ಲಿ ಲೈಸೆನ್ಸ್ ಅವಧಿ ಮುಗಿದಿದ್ದು ಪರವಾನಗಿ ಇಲ್ಲದೆ ನಡೆಯುತ್ತಿದೆಯೇ ಪಿಲಿಕುಳ ಎಂಬ ಸಂಶಯ ವ್ಯಕ್ತವಾಗಿದೆ. ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸೊರಗುತ್ತಿದ್ದು ಜೋತೆಲೆ ಮಲೀನಗೊಂಡ ನೀರು ಕುಡಿದು ಪ್ರಾಣಿಗಳು ಅಸ್ವಸ್ಥಗೊಂಡಿರುವುದು ಕಂಡಬಂದಿದೆ.
ಸೆಂಟ್ರಲ್ ಝೋ ಅಟೊರಿಟಿ ಶೋಕಾಸ್ ನೋಟಿಸ್ಗೂ ನೀಡಿದರು ಆಡಳಿತ ಮಂಡಳಿ ಕ್ಯಾರೆ ಎನ್ನದ ಇರುವುದು ಕೂಡ ಕಂಡುಬಂದಿದ್ದು,ಕರಾವಳಿಯ ಪ್ರಮುಖ ಪ್ರವಾಸಿ ತಾಣದ ಅವಸ್ಥೆ ಕಂಡು ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ಆತಂಕ ಹುಟ್ಟಿಕೊಂಡಿದೆ.


