ಬೆಂಗಳೂರು : ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಲೋಕಾಯುಕ್ತ ಪೊಲೀಸರು, ಇದೀಗ ಅರಣ್ಯ ಇಲಾಖೆಯ ಸಹಾಯಕ ಆಯುಕ್ತರೊಬ್ಬರ ಮೇಲೆ ಭರ್ಜರಿ ದಾಳಿ ನಡೆ ಸಿದ್ದಾರೆ . ಅರಣ್ಯ ರಕ್ಷಿಸಬೇಕಾದ ಅಧಿಕಾರಿಯೇ ಲೂಟಿಗಿಳಿದು ಕೋಟ್ಯಂತರ ಆಸ್ತಿ ಮಾಡಿರುವುದು ಬಯಲಿಗೆ ಬಂದಿದೆ. ಅಧಿಕಾರಿಯ ಬಳಿ ಬರೋಬ್ಬರಿ 26.55 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಶಿವಮೊಗ್ಗದ ಅರಣ್ಯ ಇಲಾಖೆ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿದ್ದ ತೇಜಸ್ ಕುಮಾರ್ ಅವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮುಂಜಾನೆಯೇ ಬಲೆ ಬೀಸಿದ್ದರು. ಚಿತ್ರದುರ್ಗದಲ್ಲಿರುವ ಇವರಿಗೆ ಸೇರಿದ ಐಷಾರಾಮಿ ರೆಸಾರ್ಟ್ ಸೇರಿ ಒಟ್ಟು 5 ಪ್ರಮುಖ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದರು. ಕಡು ಚಳಿಯಲ್ಲೂ ಅಧಿಕಾರಿಗಳು ಇಂಚಿAಚು ದಾಖಲೆಗಳನ್ನು ಪರಿಶೀಲಿಸಿದಾಗ ಸಿಕ್ಕ ಮಾಹಿತಿ ಕಂಡು ಸ್ವತಃ ಲೋಕಾಯುಕ್ತ ಸಿಬ್ಬಂದಿಯೇ ಅಚ್ಚರಿಗೊಂಡಿದ್ದಾರೆ.
ತನಿಖೆಯ ವೇಳೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ತೇಜಸ್ ಕುಮಾರ್ ಅಕ್ರಮ ಮಾರ್ಗಗಳ ಮೂಲಕ ಕೋಟಿ ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಗಳಿಸಿದ್ದಾರೆ. ಬೆಂಗಳೂರು ಮತ್ತು ವಿವಿಧೆಡೆ 4 ನಿವೇಶನಗಳು, 8 ಐಷಾರಾಮಿ ಮನೆಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ಸುಮಾರು 16 ಎಕರೆ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ. ಸುಮಾರು92 ಲಕ್ಷ ರೂ.ಮೌಲ್ಯದ ದುಬಾರಿ ಕಾರುಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 50 ಸಾವಿರ ರೂ. ನಗದು ಸದ್ಯಕ್ಕೆ ಲಭ್ಯವಾಗಿದೆ.
ಪತ್ತೆಯಾದ ಆಸ್ತಿಗಳ ಒಟ್ಟು ಮೊತ್ತ ಸರಿಸುಮಾರು 26.55 ಕೋಟಿ ರೂ.ಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ. ವಿಶೇಷವೆAz Àರೆ ತೇಜಸ್ ಕುಮಾರ್ ಅವರು ಈ ಹಿಂದೆ ಅರಣ್ಯ ಇಲಾಖೆಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಅವರು ಶಿವಮೊಗ್ಗದ ಅರಣ್ಯ ಇಲಾಖೆಯ ಮ್ಯಾನೇಜರ್ ಆಗಿ ವರ್ಗಾವಣೆಯಾಗಿದ್ದರು. ಅವರು ಹೊಸ ಹುದ್ದೆಯನ್ನು ಅಲಂಕರಿಸುವ ಮುನ್ನವೇ ಲೋಕಾಯುಕ್ತರ ಅತಿಥಿಯಾಗಿದ್ದಾರೆ.


