ಮಂಗಳೂರು : KAS ಅಧಿಕಾರಿಗೆ ನಿಂದಿಸಿ ರಾಜೀವ್ ಗೌಡ ತಲೆಮರೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ಕಾರು ಮಂಗಳೂರಿನಲ್ಲಿ ಪತ್ತೆಯಾಗಿದೆ.
ಮಂಗಳೂರಿನ ಪ್ರತಿಷ್ಠಿತ ಉದ್ಯಮಿಯಿಂದ ರಾಜೀವ್ ಗೌಡಗೆ ಆಶ್ರಯ ನೀಡಿದ ಸಂಶಯ ವ್ಯಕ್ತವಾಗಿದ್ದು ಪೊಲೀಸರು ಕಳೆದ ಮೂರ್ನಾಲ್ಕು ದಿನಗಳಿಂದ ಮಂಗಳೂರಿನಲ್ಲಿ ಶೋಧ ನಡೆಸಿದ್ದಾರೆಂದು ಮಹತಿ ದೊರೆತಿದೆ.
ಈ ಬಗ್ಗೆ ಪೊಲೀಸರು ಆರೋಪಿಯ ಪತ್ತೆಗೆ ಜಾಡು ಹಿಡಿದಿದ್ದು ಆರೋಪಿ ರಾಜೀವ್ ಗೌಡ ಮಂಗಳೂರಿನಿಂದ ಕೇರಳ ಅಥವಾ ಗೋವಾಗಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಕೇರಳ ಅಥವಾ ಗೋವಕ್ಕೆ ರೈಲಿನಲ್ಲಿ ಪಲಾಯನಗೊಂಡಿರಬಹುದೆಂದು ಪೊಲೀಸರು ಮಾಹಿತಿ ಕಲೆಹಾಕಿದ್ದು ರಾಜೀವ್ ಗೌಡ ಗೆ ಪಕ್ಕದ ರಾಜ್ಯದಲ್ಲಿ ಆಶ್ರಯ ನೀಡಲು ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿ ಸಹಾಯ ಮಾಡಿರಬಹುದೆಂದು ಮಾಹಿತಿ ದೊರೆತಿದೆ.


