ಬಳ್ಳಾರಿ : ಬಳ್ಳಾರಿಯ ಕಂಟೋನ್ಮೆಂಟ್ ಬಳಿ ಜನಾರ್ಧನ ರೆಡ್ಡಿ ಅವರ ಲೇಔಟ್ ನಲ್ಲಿ ಜನಾರ್ಧನ ರೆಡ್ಡಿ ಅವರ ಮಾಡೆಲ್ ಹೌಸ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಕಂಟೋನ್ಮೆಂಟ್ ಬಳಿ ಇರುವ ಜನಾರ್ಧನ ರೆಡ್ಡಿ ಒಡೆತನದ ಜಿ ಸ್ಕ್ವೇರ್ ನಲ್ಲಿ ಘಟನೆ ನಡೆದಿದೆ. ಬೆಳಗಲ್ ರಸ್ತೆಯಲ್ಲಿರುವ ಜಿ ಸ್ಕ್ವೇರ್ ನ ಮಾಡೆಲ್ ಹೌಸ್ ನಲ್ಲಿ ಯಾರು ವಾಸವಿರದ ಮನೆಗೆ ಬೆಂಕಿಹಚ್ಚಿದ್ದು ತಕ್ಷಣ ಸ್ಥಳಕ್ಕೆ ಅಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳ್ಳಾರಿ ಬ್ಯಾನರ್ ಗಲಾಟೆ ಅರುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು
ಜನಾರ್ದನ ರೆಡ್ಡಿ ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ್ದಾರೆ. ಮಾಡೆಲ್ ಹೌಸ್ ಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು ಇದು ಕಾಂಗ್ರೆಸ್ ನವರ ಕೃತ್ಯ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅರೋಪಿಸಿದ್ದಾರೆ.
ಮೊನ್ನೆ ಬ್ಯಾನರ್ ಗಲಾಟೆಯಾದಾಗ ಬೆಂಕಿ ಹಚ್ಚುತ್ತೇನೆಂದು ಹೇಳಿದ್ರು,ಅಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಇದೀಗ ನಮಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ್ದಾರೆ,ಸಂಜೆ ಆರೂವರೆ ಹೊತ್ತಿಗೆ ಬೆಂಕಿ ಹತ್ತಿದೆ,ಇದನ್ನು ನೋಡಿದ ಕೆಲವರು ಬೆಂಕಿ ಹಚ್ಚಿದವರುನ್ನು ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ,ಇದು ಕಾಂಗ್ರೆಸ್ ನವರ ಕೃತ್ಯ ಎಂದು ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.ಬಳ್ಳಾರಿ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ ರೆಡ್ಡಿ ಬ್ರದರ್ಸ್ ಹಾಗೂ ರಾಮುಲುಗೆ ಸೇರಿದ ಮನೆಗೆ ಬೆಂಕಿ ಘಟನೆಗೆ ಖಂಡಿಸಿ ಬಳ್ಳಾರಿಯ ರಾಯಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ಬೆಂಕಿ ಹಚ್ಚಿದ ವ್ಯಕ್ತಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೋರಹಾಕಿದ್ದು
ಹಂತ ಹಂತವಾಗಿ ರಾಯಲ್ ವೃತ್ತಕ್ಕೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದ ಫಕೀರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಸೇರಿ ಹಲವರು ಭಾಗಿಯಾಗಿದ್ದಾರೆ.
ಬಳ್ಳಾರಿ ಮನೆಗೆ ಬೆಂಕಿ ಘಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ. ಸುಮನ್ ಫನ್ನೆಕರ್ ಆಗಮಿಸಿದ್ದಾರೆ.ಬಳಿಕ ಮಾತನಾಡಿದ ಅವರು ಜನಾರ್ದನ ರೆಡ್ಡಿ ಒಡೆತನದ ಮನೆಗೆ ಬೆಂಕಿ ಘಟನೆ ಆಗಿದೆ ಮನೆ ಬಳಿಯಲ್ಲಿ ಕತ್ತಲು ಇದೆ ಘಟನೆ ಬಗ್ಗೆ ತನಿಕಾಧಿಕಾರಿಗಳು ಹೋಗಿದ್ದುಕತ್ತಲೆ ಹಿನ್ನಲೆ ಬೆಳಗ್ಗೆ FSL ಟೀಂ ,ತನಿಕಾ ತಂಡ ಭೇಟಿ ಪರಿಶೀಲನೆ ಮಾಡುತ್ತೇವೆ. ಇದುವರಿಗೂ ಯಾವ್ದೆ ದೂರು ನೀಡಿಲ್ಲಆರೋಪಿಗಳ ಬಂಧನಕ್ಕೆ ಮನವಿ ನೀಡಿದ್ದಾರೆ,ಮನವಿ ಅನ್ವಯ ಕ್ರಮಕ್ಕೆ ಮುಂದಾಗ್ತಿವಿ ಯಾರ ಮೇಲೆ ದೂರು ಕೊಟ್ರು ಕ್ರಮ ಜರುಗ್ತೇವೆ ಎಂದು ಎಸ್ಪಿ ಸುಮನ್ ರವರು ತಿಳಿಸಿದ್ದಾರೆ.


