ಮೀರ್‌ಪುರ್ : ಕಳೆದ 15 ದಿನಗಳಿಂದ ನಡೆಯುತ್ತಿದ್ದ ಬಿಸಿಸಿಐ, ಐಸಿಸಿ ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿ ನಡುವಿನ ಗುದ್ದಾಟ ಕೊನೆಗೂ ಅಂತ್ಯ ಕಂಡಿದೆ. ಬಿಸಿಸಿಐ ನೀಡಿದ್ದ ಗಡುವು ಮುಗಿದು ಒಂದು ದಿನದ ನಂತರ ಬಿಸಿಬಿ ತನ್ನ ಸ್ಪಷ್ಟ ನಿಲುವನ್ನು ತಿಳಿಸಿದ್ದು, ಟಿ೨೦ ವಿಶ್ವಕಪ್ ಆಡಲು ನಿರಾಕರಿಸಿದೆ. ಅಲ್ಲದೇ, ಈ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ತಿಳಿಸಿ ಹೊರಟು ಹೋಗಿದೆ.
ಇದರಿಂದ, ಬಾಂಗ್ಲಾ ಕಾಣಿಸಿಕೊಂಡಿದ್ದ ಟೂರ್ನಿಯ `ಸಿ’ ಗುಂಪಿನಲ್ಲಿ ಈ ತಂಡದ ಬದಲಿಗೆ ಸ್ಕಾಟ್ಲೆಂಡ್ ಕಾಣಿಸಿಕೊಳ್ಳಲಿದೆ. ಅಷ್ಟೇ ಅಲ್ಲದೇ, ಬಾಂಗ್ಲಾದೇಶ ಭವಿಷ್ಯದಲ್ಲಿ ಹಲವು ಐಸಿಸಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗುವ ಆತಂಕಕ್ಕೆ ತಾನೇ ಸಿಲುಕಿಕೊಂಡಿದೆ.
ನಿಗದಿಯAತೆ ಜನವರಿ ೨೧ರೊಳಗೆ ತನ್ನ ನಿಲುವನ್ನು ಪರಿಶೀಲಿಸಿ ವರದಿ ಸಲ್ಲಿಸಲು ಅಂತಾರಾಷ್ಟಿçÃಯ ಕ್ರಿಕೆಟ್ ಸಮತಿ ಸೂಚಿಸಿದ್ದರಿಂದ ಬಾAಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಬಾAಗ್ಲಾ ಸರ್ಕಾರದ ಮೊರೆ ಹೋಗಿತ್ತು. ಈ ಭೇಟಿಯಾದ ಕೆಲವೇ ಹೊತ್ತಲ್ಲಿ, ಬಿಸಿಬಿ ತನ್ನ ನಿಲುವನ್ನು ಪ್ರಕಟಿಸಿದೆ.
ಬಿಸಿಬಿ: ಟಿ೨೦ ವಿಶ್ವಕಪ್ ಆಡದಿರಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಈಗಾಗಲೇ ತನ್ನ ಕಾರಣ ನೀಡಿದ್ದು `ಭಾರತ ತನ್ನ ಆಟಗಾರರಿಗೆ ಸುರಕ್ಷಿತವಲ್ಲ. ಆದ್ದರಿಂದ ಭಾರತಕ್ಕೆ ಪ್ರಯಾಣಿಸುವುದಿಲ್ಲ’ ಎಂದು ಸಬೂಬು ನೀಡಿತ್ತು. ಇದಕ್ಕೆ ಐಸಿಸಿ ಕೂಡ ಚೆನ್ನೈ ಹಾಗೂ ತಿರುವನಂತಪುರAನಲ್ಲಿ ಬಾAಗ್ಲಾದೇಶ ಪಂದ್ಯಗಳನ್ನು ಆಡಿಸಲು ನಿರ್ಧರಿಸಿತ್ತು. ಅಲ್ಲದೇ, ಸೂಕ್ತ ಭದ್ರತೆ ವ್ಯವಸ್ಥೆಗೆ ಒತ್ತು ನೀಡುವುದಾಗಿ ತಿಳಿಸಿತ್ತು. ಆದರೂ, ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಬಿಸಿಬಿ ಒಪ್ಪಲಿಲ್ಲ. ಬದಲಾಗಿ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾಗೆ ಬದಲಿಸಿ ಎಂದು ಐಸಿಸಿಗೆ ಮನವಿ ಮಾಡಿತು. ಇದಕ್ಕೂ ಐಸಿಸಿ ಯಾವುದೇ ಮಾನ್ಯತೆ ನೀಡಿರಲಿಲ್ಲ.
ಇನ್ನು ಭಾರತ ಹಾಗೂ ಬಿಸಿಸಿಐ ವಿರುದ್ಧದ ತನ್ನ ಧೋರಣೆ ಮುಂದುವರೆಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ ಪ್ರತಿ ವೇಳೆಯೂ ಐಸಿಸಿಯನ್ನು ವಿರೋಧಿಸಿತ್ತು. ಅದರಲ್ಲೂ ಅಧ್ಯಕ್ಷ ಜಯ್ ಶಾ ಅವರ ಸಮ್ಮುಖದಲ್ಲಿ ಬಾಂಗ್ಲಾದಲ್ಲೇ ಸಭೆ ಸೇರಿ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಐಸಿಸಿ ತಿಳಿಸಿತ್ತು. ಆದ್ರೆ, ಈ ವೇಳೆ ಭಾರತೀಯ ಮೂಲದ ಐಸಿಸಿ ಅಧಿಕಾರಿಗೆ ತನ್ನ ದೇಶದ ವೀಸಾ ನೀಡಲು ಬಾಂಗ್ಲಾ ನಿರಾಕರಿಸಿತ್ತು. ಆದರೂ, ಐಸಿಸಿ ಅನ್ಯ ಅಧಿಕಾರಿಗಳು ಬಿಸಿಬಿ ಜೊತೆ ಚರ್ಚಿಸಿದ್ದರು. ಇವೆಲ್ಲಕ್ಕೂ ಬಿಸಿಬಿ ಬೆಂಬಲ ನೀಡಿರಲಿಲ್ಲ. ಹಾಗಾಗಿ, ಐಸಿಸಿ ಜನವರಿ 21ರವರೆಗೆ ಗಡುವು ನೀಡಿತ್ತು.
ಭಾರತದಲ್ಲಿ ನಡೆಯಲಿರುವ ಟಿ೨೦ ವಿಶ್ವಕಪ್‌ಗೆ ಬಾಂಗ್ಲಾ ಬಹಿಷ್ಕಾರ ವಿಧಿಸಿರುವುದರಿಂದ, ಉಭಯ ರಾಷ್ಟçಗಳ ದ್ವಿಪಕ್ಷೀಯ ಸರಣಿಗಳ ಮೇಲೂ ಪರಿಣಾಮ ಬೀರಲಿದೆ. 2025 ರಲ್ಲಿ ನಡೆಯಬೇಕಿದ್ದ ಸರಣಿ 202೬ಕ್ಕೆ ಮುಂದೂಡಲಾಗಿತ್ತು. ಆದ್ರೆ, ಈ ಬೆಳವಣಿಗೆಯಿಂದ ಈ ಸರಣಿ ನಡೆಯುವುದು ಅನುಮಾನ.


