Sunday, January 25, 2026
Flats for sale
Homeಜಿಲ್ಲೆಮಂಗಳೂರು : ಪ್ರಚೋದನಾಕಾರಿ ಭಾಷಣ : ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮತ್ತೆ ಎಫ್‌ಐಆರ್...

ಮಂಗಳೂರು : ಪ್ರಚೋದನಾಕಾರಿ ಭಾಷಣ : ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮತ್ತೆ ಎಫ್‌ಐಆರ್ ದಾಖಲು.

ಮಂಗಳೂರು : ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ರವರು ಪ್ರಚೋದನಾಕಾರಿ ಭಾಷಣ ಆರೋಪದಡಿ ಪುತ್ತೂರಿನಲ್ಲಿ ಕೇಸ್ ದಾಖಲಾಗಿದೆ. ಪುತ್ತೂರಿನ ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಕೋಮುದ್ವೇಷದ ಭಾಷಣ ಆರೋಪದ ಹಿನ್ನೆಲೆ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ನಿವಾಸಿ ರಾಮಚಂದ್ರ ಕೆ. ನೀಡಿದ ದೂರಿನ ಮೇರೆಗೆ ಖಾಕಿ ಪಡೆ ಕ್ರಮ ಕೈಗೊಂಡಿದ್ದು ಭಾಷಣ ಪ್ರಸಾರ ಮಾಡಿದ ‘ವಿಕಸನ ಟಿವಿ’ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮಆಯೋಜಕರ ವಿರುದ್ಧವೂ ಕೇಸ್ ದಾಖಲಾಗಿದೆ.

ಜನವರಿ 12ರಂದು ನಡೆದಿದ್ದ ಕಾರ್ಯಕ್ರಮ ಇದಾಗಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರು ವಿವಾದಾತ್ಮಕ ಮಾತನಾಡಿದ ಆರೋಪದ ಹಿನ್ನೆಲೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ವಿವಿಧ ಗಂಭೀರ ಸೆಕ್ಷನ್‌ಗಳ ಮೂಲಕ ಎಫ್‌ಐಆರ್ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular