ಕಲಬುರಗಿ ; ಜೈಲಿನೊಳಗೆ ಬಿಡಿ,ಸಿಗರೇಟ್ ಬಂಡಲ್ ಎಸೆಯಲು ಬಂದಿದ್ದ ಮೂವರನ್ನು ಬಂಧಿಸಿದ್ದಾರೆ.ಅಕ್ರಮವಾಗಿ ಜೈಲಿನೊಳಗೆ ಮಾದಕವಸ್ತು ಬೀಡಿ ಸಿಗರೇಟ್ ಬಂಡಲ್ ಎಸೆಯಯವಾಗ ಮೂವರು ಸೆರೆ ಸಿಕ್ಕಿದ್ದು
ಜೈಲು ಭದ್ರತಾ ಪಡೆ ಮೂವರನ್ನು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಜೈಲಿನ ಬಳಿ ಪ್ಯಾಕ್ ಮಾಡಿದ ವಸ್ತು ಎಸೆಯಲು ಪ್ರಯತ್ನಿಸಿದ್ದು
ಜೈಲು ಕಾಂಪೌಂಡ್ ಮೇಲಿಂದ ಎಸೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಭದ್ರಯ ಪಡೆ ಹಿಡಿದಿದ್ದಾರೆ.
ಕೆಎಸ್ಐಎಸ್ ಎಫ್ ಸಿಬ್ಬಂದಿಯಿಂದ ಮೂವರನ್ನು ಹಿಡಿದು ಫರಹತಬಾದ ಪೊಲೀಸರಿಗೆ ಒಪ್ಪಿಸಿದ್ದು ಬಂಧಿತರನ್ನು ಪಿಂಟು,ಅನಿಲ್ ,ವಿಜಯ್ ಜಾಧವ್ ಎಂದು ತಿಳಿದುಬಂದಿದೆ. ಮೂವರು ಕಲಬುರಗಿಯ ಬಸವ ನಗರ ನಿವಾಸಿಗಳಾಗಿದ್ದು ಈ ಬಗ್ಗೆ ಫರಹತಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


