ಧಾರವಾಡ ; ಉಸಿರಾಟದ ತೊಂದರೆಯಿಂದ ನೇಪಾಳ ಮೂಲದ ಆರು ಜನ ಹೋಟೆಲ್ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಧಾರವಾಡ ನಗರದ ನಂದಿನಿ ಲೇಔಟ್ ನಲ್ಲಿ ನಡೆದಿದೆ.
ಈ ವ್ಯಕ್ತಿಗಳು ಚಿಂಗ್ಸ್ ಚೌ ಎಂಬ ಹೊಟೇಲ್ ನಲ್ಲಿ ಕೆಲಸ ಮಾಡುವ ನೇಪಾಳ ಮೂಲದವರಾಗಿದ್ದಾರೆ.
ನರೇಶ (45), ನಿತೇಶ್ (18), ಡಿಕೆಶಿ (40), ಸುಧನ್ (30), ಕುಮಾರ್ (50), ಲಕ್ಷ್ಮಣ್ (30) ರವರನ್ನು ಸದ್ಯ ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಮೂವರಿಗೆ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.ಘಟನೆಗೆ ನಿಖರ ಕಾರಣ ತಿಳಿದುಬಾರದ ಹಿನ್ನೆಲೆ ಸ್ಥಳಕ್ಕೆ ಹುಬ್ಬಳ್ಳಿ- ಧಾರವಾಡ ನಗರ ಪೋಲಿಸ್ ಆಯುಕ್ತರು ಹಾಗೂ ವಿದ್ಯಾಗಿರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


