ಬೆಂಗಳೂರು : ಭಾರತ ಹಾಗೂ ಡಬ್ಲ್ಯೂ ಪಿಎಲ್‌ನ ಆರ್‌ಸಿಬಿ ಆಟಗಾರ್ತಿ, ಕನ್ನಡತಿ ಶ್ರೇಯಾಂಕ ಪಾಟೀಲ್ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ಗೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದು ಕಳೆದ 13-14 ತಿಂಗಳು ಕಾಲ ಅನುಭವಿಸಿದ ಮಾನಸಿಕ ತೊಳಲಾಟವನ್ನು ಹಂಚಿಕೊAಡಿದ್ದಾರೆ. ಗಾಯದ ಸಮಸ್ಯೆಯಿಂದ 3 ನೇ ಆವೃತ್ತಿಯ ಡಬ್ಲ್ಯೂ ಪಿಎಲ್‌ನಿಂದ ದೂರ ಉಳಿಯಬೇಕಿದ್ದ ಶ್ರೇಯಾಂಕಳನ್ನು ಆರ್‌ಸಿಬಿ ಕಳೆದ ಮೆಗಾ ಆಕ್ಷನ್‌ನಲ್ಲಿ ರೀಟೈನ್ ಮಾಡಿಕೊಂಡಿತ್ತು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಶ್ರೇಯಾಂಕ ಪಾಟೀಲ್ ತಮ್ಮ ಪಯಣವನ್ನು ವಿವರಿಸಿದ್ದಾರೆ.
ಡಬ್ಲ್ಯೂ ಪಿಎಲ್ ಆಡುತ್ತಿರುವುದು ಸಂತಸ ನೀಡಿದ್ದು, 13 ತಿಂಗಳುಗಳಿAದ ಮೈದಾನದಿAದ ದೂರ ಉಳಿದಿದ್ದು ದುರದೃಷ್ಟಕರ. ಭಾರತ ತಂಡದ ಆಟಗಾರರು, ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಸೇರಿದಂತೆ ಎಲ್ಲರೂ ನನ್ನೊಂದಿಗಿದ್ದರು. ಅಲ್ಲದೇ ಏಕದಿನ ವಿಶ್ವಕಪ್ ತಂಡದಲ್ಲಿ ಇಲ್ಲದೇ ಇದ್ದಿದ್ದು ಬೇಸರ ತಂದಿದ್ದು. ವಿಶ್ವಕಪ್ ಗೆಲುವಿನ ಬಳಿಕ ಆಟಗಾರ್ತಿಯರು 2026ರ ವಿಶ್ವಕಪ್‌ನಲ್ಲಿ ಆಡುವ ವಿಶ್ವಾಸ ತುಂಬಿದ್ದರು’ಎAದು ಶ್ರೇಯಾAಕ ತಿಳಿಸಿದ್ದಾರೆ.


