Friday, January 16, 2026
Flats for sale
Homeದೇಶನವದೆಹಲಿ : ದೆಹಲಿಯ ತುರ್ಕ್ಮನ್ ಗೇಟ್‌ನಲ್ಲಿರುವ ಫೈಜ್-ಎ-ಇಲಾಹಿ ಮಸೀದಿಯ ಅಕ್ರಮ ಕಟ್ಟಡ ತೆರವು : ಪೊಲೀಸರಿಗೆ...

ನವದೆಹಲಿ : ದೆಹಲಿಯ ತುರ್ಕ್ಮನ್ ಗೇಟ್‌ನಲ್ಲಿರುವ ಫೈಜ್-ಎ-ಇಲಾಹಿ ಮಸೀದಿಯ ಅಕ್ರಮ ಕಟ್ಟಡ ತೆರವು : ಪೊಲೀಸರಿಗೆ ಕಲು ತೂರಾಟ.

ನವದೆಹಲಿ : ಮಂಗಳವಾರ ಮಧ್ಯರಾತ್ರಿ ಸುಮಾರು 1 ಗಂಟೆಯ ವೇಳೆಗೆ ದೆಹಲಿಯ ತುರ್ಕ್ಮನ್ ಗೇಟ್‌ನಲ್ಲಿರುವ ಫೈಜ್-ಎ-ಇಲಾಹಿ ಮಸೀದಿಯ ಬಳಿ ಇದ್ದ ಅಕ್ರಮ ಕಟ್ಟಡಗಳನ್ನು ತೆರವು ಮಾಡುತ್ತಿದ್ದ ದೆಹಲಿ ಪಾಲಿಕೆಯ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಇದು ಈಗ ಭಾರೀ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ದೆಹಲಿ ಹೈಕೋರ್ಟ್ ಆದೇಶದಂತೆ ಪಾಲಿಖೆ ಅಧಿಕಾರಿಗಳು ಮಸೀದಿ ಅಕ್ಕಪಕ್ಕದ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ. ಈ ಕಾರ್ಯಾಚರಣೆಗೆ 3೦ಕ್ಕೂ ಹೆಚ್ಚು ಬುಲ್ಡೋಜರ್‌ಗಳನ್ನು ಬಳಸಲಾಗಿದೆ. ಪಾಲಿಕೆ ಅಧಿಕಾರಿಗಳು ಬರುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಭಾರಿ ವಿರೊಧ ವ್ತಕಪಡಿಸಿದರು. ಜತೆಗೆ ಪ್ರತಿಭಟನೆಗೆ ಕೂತು ಕಾರ್ಯಾಚರಣೆಗೆ ತಡೆಯುಂಟು ಮಾಡಿದರು. ಈ ವೇಳೆ ಗುಂಪಿನಲ್ಲಿದ್ದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನವಾಯಿತು. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದAತಿದ್ದು, ಭದ್ರತೆಗೆಂದು ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. 5 ಪೊಲೀಸರಿಗೆ ಗಾಯ, 5 ಸೆರೆ: ಕಲ್ಲು ತೂರಾಟದ ವೇಳೆ 5 ಜನ ಪೊಲೀಸರಿಗೆ ಗಾಯವಾಗಿದೆ ಎಂದು ದೆಹಲಿ ಡಿಸಿಪಿ ಹೇಳಿದ್ದಾರೆ. ಇನ್ನು ಘಟನೆಗೆ ಸಂಬAಧಿಸಿ 5 ಜನರನ್ನು ಬಂಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular