ಧಾರವಾಡ : ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಪುಟ್ಟ ಮಕ್ಕಳು 6 ಜನರಿಗೆ ಗಾಯವಾದ ಘಟನೆ ಧಾರವಾಡದ ಹೊರಹೊಲಯದಲ್ಲಿನ ಸುಣ್ಣದಬಟ್ಟಿ ಬಡಾವಣೆಯಲ್ಲಿ ನಡೆದಿದೆ.
ಇಸ್ಮಾಯಿಲ್ ಹೊರಕೇರಿ ಎನ್ನುವರಿಗೆ ಸೇರಿದ ಮನೆಯಲ್ಲಿಬೆಳಗಿನ ಜಾವ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಸಿಲಿಂಡರ್ ಬ್ಲಾಸ್ ನಿಂದಾಗಿ ಪುಟ್ಟ ಮಕ್ಕಳು ಸೇರಿ ಆರು ಜನರಿಗೆ ಗಂಭೀರ ಗಾಯಗಳಾಗಿವೆ.ಸದ್ಯ ಎಲ್ಲರಿಗೂ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.


