Saturday, January 17, 2026
Flats for sale
Homeಜಿಲ್ಲೆಮಂಗಳೂರು : ಮುಸ್ಲಿಮರ ಮತ ಓಲೈಕೆಗಾಗಿ ಸಿ. ಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಗಿಲು ಅಕ್ರಮ...

ಮಂಗಳೂರು : ಮುಸ್ಲಿಮರ ಮತ ಓಲೈಕೆಗಾಗಿ ಸಿ. ಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಗಿಲು ಅಕ್ರಮ ಲೇಔಟ್ ನಿವಾಸಿಗಳಿಗೆ ಹೊಸ ಮನೆ ಕಟ್ಟಿಸಿಕೊಡುತ್ತಿದೆ : ಶಾಸಕ ಡಾ. ಭರತ್ ಶೆಟ್ಟಿ ವೈ.

ಮಂಗಳೂರು : ಕೋಗಿಲು ಲೇಔಟ್ ನಲ್ಲಿ ಅಕ್ರಮವಾಗಿ ಜನ ಬಂದು ನೆಲೆಸಿದ್ದಾರೆ ಅವರಿಗೆ ಸಿದ್ದರಾಮ್ಯನ ನೇತೃತ್ವದ ಸರಕಾರ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತಿದೆ . ಇದು ಮುಸ್ಲಿಂ ಮತ ಓಲೈಕೆ ಮತ್ತು ಕೇರಳದ ರಾಜಕೀಯ ಲಾಭ ಪಡೆಯುವ ಹುನ್ನಾರ ಅಡಗಿದೆ ಎಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ತಿಳಿಸಿದರು .

ಅವರು ಮಂಗಳೂರು ಪಾಲಿಕೆಯಲ್ಲಿರುವ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಹಿಂದೆ ಅಕ್ರಮ ಒತ್ತುವರಿ ಮಾಡಿ ತೆರೆವು ಮಾಡಿದ ಮನೆಗಳನ್ನು ಮತ್ತೆ ಕಟ್ಟಿಸಿಕೊಡುವ ಕೆಲಸ ಸರಕಾರ ಮಾಡಲಿಲ್ಲ., ಆದರೆ ಇದೀಗ ಕೇರಳದಿಂದ ಬಂದಂತಹ ೪ ಮುಸಲ್ಮಾನರ ಮನೆಕೋಗಿಲು ಲೇಔಟ್ ನಲ್ಲಿ ಇದೆ ಎನ್ನುವ ಕಾರಣಕ್ಕೆ, ಕೇರಳದ ರಾಜಕೀಯ ಲಾಭವನ್ನು ಪಡೆಯುವ ಯೋಜನೆಯಿಂದ ,ಹಾಗೂ ಅಲ್ಲಿಂದ ಬಂದ ರಾಜಕೀಯ ಒತ್ತಡದಿಂದ ಕೋಗಿಲು ಲೇಔಟ್ ನ ೩- ೪ ಕಿಲೋ ಮೀಟರ್ ವ್ಯಾಪ್ತಿ ದೂರದಲ್ಲೇ ಎಲ್ಲರಿಗೂ ಸರಕಾರ ಮನೆ ಕಟ್ಟಿ ಕೊಡುವ ಕೆಲಸ ಮಾಡುತ್ತಿದೆ . ಆದರೆ ಪಂಚಾಯತ್ ಮತ್ತು ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಬರುವ ನಾಗರಿಕರಿಗೆ ಮನೆ ಬೇಕ್ಕೆನ್ನುವ ಬೇಡಿಕೆ ಸರಕಾರ ಮುಂದೆ ಅದೆಷ್ಟೋ ದಿನದಿಂದ ಇಡುತ್ತಿದ್ದರೂ ಅದು ಈಡೇರದೇ ಹಾಗೇ ಉಳಿದಿದೆ . ಅಂಥವರಿಗೆ ಸರ್ಕಾರ ಮನೆ ಕಟ್ಟಿಸಿಕೊಡಲು ಹಿಂದೇಟು ಹಾಕುತ್ತದೆ .

೨೦೨೩ ರ ಮೊದಲು ಕೋಗಿಲು ಲೇ ಔಟ್ ನಲ್ಲಿ ಈ ರೀತಿಯಾಗಿ ಆಕ್ರಮಣ ವಾಗಿ ಕಟ್ಟಿದ ಮನೆಗಳು ಇರಲಿಲ್ಲ.ಆದರೆ ಈ ಸ್ಥಳದಲ್ಲಿ ಈಗ ಮನೆಗಳಲ್ಲಿವೆ . ಈ ವಲಸಿಗರು ಅಲ್ಲಿ ಬಂದು ನೆಲೆಸಲು ಕಾಂಗ್ರೇಸ್ ಸರ್ಕಾರದ ದೊಡ್ಡ ಮಟ್ಟದ ಪಿತೂರಿಯೇ ಅಡಗಿದೆ . ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆಯನ್ನು ಕಳೆದುಕೊಂಡವರು ಅದೆಷ್ಟೋ ಜನರು ಇದ್ದಾರೆ . ಆದರೆ ಅವರಿಗೆ ಸರಕಾರ ಮನೆಯನ್ನು ಕಟ್ಟಿಸಿಕೊಡುವ ಯೋಚನೆಯು ಮಾಡುವುದಿಲ್ಲ . ಮುಸ್ಲಿಮರ ಮತ ಓಲೈಕೆಗಾಗಿ , ಮತ ಬ್ಯಾಂಕ್ ಸೆಳೆಯುವ ದೃಷ್ಟಿಕೋನದಿಂದ ಮನೆಯನ್ನು ಮತ್ತೆ ಕಟ್ಟಿಸಿಕೊಡಲಾಗುತ್ತಿದೆ ಎಂದರು .

ಈ ಆಕ್ರಮಣ ವಲಸಿರ ಹಿಂದೆ ದೊಡ್ಡ ಜಾಲವೇ ಇದೆ ಅದನ್ನು ಮೊದಲು ಪತ್ತೆ ಹಚ್ಚಬೇಕು . ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು . ಇದರಲ್ಲಿ ರಾಜಕೀಯ ವ್ಯಕ್ತಿಗಳ ಕೈ ಇದೆಯೇ .. ಅಧಿಕಾರಿಗಳ ಕೈ ಇದೆಯೇ ಎಂಬುದಾಗಿ ಸಮಗ್ರ ತನಿಖೆ ಮಾಡಬೇಕು. ವಸತಿ ಸಚಿವ ಜಮೀರ್ ಅಹ್ಮದ್. ಮತ್ತು ಅವರ ಗ್ಯಾಂಗ್ ಈ ಕಾರ್ಯದಲ್ಲಿ ಶಾಮೀಲು ಆಗಿರುವುದಾಗಿ ನನ್ನ ಅಭಿಪ್ರಾಯವಾಗಿದೆ ಎಂದರು .

RELATED ARTICLES

LEAVE A REPLY

Please enter your comment!
Please enter your name here

Most Popular