Friday, January 16, 2026
Flats for sale
Homeರಾಜ್ಯಯಾದಗಿರಿ ; ಬಿಸಿಯೂಟದಲ್ಲಿ ವಿಷಕಾರಿ ಹಲ್ಲಿ ಪತ್ತೆ, ವಿದ್ಯಾರ್ಥಿಗಳು ಅಸ್ವಸ್ಥ,ಐವರ ಸ್ಥಿತಿ ಗಂಭೀರ…!

ಯಾದಗಿರಿ ; ಬಿಸಿಯೂಟದಲ್ಲಿ ವಿಷಕಾರಿ ಹಲ್ಲಿ ಪತ್ತೆ, ವಿದ್ಯಾರ್ಥಿಗಳು ಅಸ್ವಸ್ಥ,ಐವರ ಸ್ಥಿತಿ ಗಂಭೀರ…!

ಯಾದಗಿರಿ ; ಊಟ ಸೇವಿಸಿದ 50ಕ್ಕೂ ಅಧಿಕ‌ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಐದು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ವಡ್ಡರ ಕಾಲೋನಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ವಿಶ್ವಗಂಗಾ ಎಂಬ ಏಜೇನ್ಸಿ ಶಾಲೆಗೆ ಬಿಸಿಯೂಟವನ್ನು ಸರಬರಾಜು ಮಾಡುತ್ತಿದ್ದು ಪ್ರತಿ ನಿತ್ಯದಂತೆ ಇವತ್ತು ಕೂಡ ಮಧ್ಯಾಹ್ನದ ಬಿಸಿಯೂಟ ಮಕ್ಕಳು ಸೇವಿಸಿದ್ದಾರೆ. ಆಗ ಓರ್ವ ವಿದ್ಯಾರ್ಥಿನಿಯ ತಟ್ಟೆಯಲ್ಲಿ ಸತ್ತಿರುವ ಹಲ್ಲಿ ಪತ್ತೆಯಾಗಿದ್ದು ಊಟ ಸೇವಿಸಿದ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಇದರಿಂದಾಗಿ ಶಾಲೆಯ ಸುಮಾರು 50ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ

ಅಸ್ವಸ್ಥಗೊಂಡ ಮಕ್ಕಳನ್ನು ತಿಮ್ಮಾಪುರ ಪಿಹೆಚ್‌ಸಿಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,ಗಂಭೀರ ಸ್ಥಿತಿಯಲ್ಲಿ ಮಕ್ಕಳನ್ನು ಸುರಪುರ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಘಟನೆ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಅಧಿಕಾರಿಗಳು ದೌಡಹಿಸಿದ್ದು ಮಕ್ಕಳ ಆರೋಗ್ಯ ವಿಚಾರಣೆ ಮಾಡಿದ್ದಾರೆ.

ಬಿಇಒ ಯಲ್ಲಪ್ಪ ಕಾಡ್ಲೂರ್, ಟಿಹೆಚ್ಒ ರಾಜಾ ವೆಂಕಟಪ್ಪ ನಾಯಕ, ಅಕ್ಷರ ದಾಸೋಹ ಅಧಿಕಾರಿಗಳು ಆಸ್ಪತ್ರೆಗೆ ಬೇಟಿನೀಡಿದ್ದು ಶಾಲೆಯಲ್ಲಿನ ಆಹಾರ ಗುಣಮಟ್ಟ ಮತ್ತು ಏಜೇನ್ಸಿಯ ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಮಕ್ಕಳ ಅಸ್ವಸ್ಥದಿಂದ ಆತಂಕಗೊಂಡ ಪೋಷಕರು, ಏಜೇನ್ಸಿ ವಿರುದ್ಧ ಪೋಷಕರ ಆಕ್ರೋಶ ಹೊರಹಾಕಿದ್ದಾರೆ. ಬಡ ಮಕ್ಕಳ ಜೀವದ ಜೊತೆ ಆಟವಾಡ್ತಿರುವ ಏಜೇನ್ಸಿ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರಹಿಸಿದ್ದು ಅಧಿಕಾರಿಗಳ ವಿರುದ್ಧ ಅಕ್ರೊಶಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular