ಮಂಗಳೂರು ; ಇಂದು ಬೆಳಿಗ್ಗೆ 10 ಗಂಟೆಗೆ ಅಬ್ದುಲ್ ಸತ್ತಾರ್ ಮುಲ್ಲರಪಟ್ನ ಎಂಬ ವ್ಯಕ್ತಿ ತನ್ನ 11 ವರ್ಷದ ಮಗಳೊಂದಿಗೆ ಸುಮಾರು 19 ಕೆಜಿ ಗೋಮಾಂಸವನ್ನು ಯಾವುದೇ ದಾಖಲೆಗಳಿಲ್ಲದೆ ಹೋಗುತ್ತಿದ್ದ ಸಂದರ್ಭದಲ್ಲಿ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಿ ನಾರ್ಲಪದವಿ ರಸ್ತೆಯಲ್ಲಿ ಇಬ್ಬರು ಯುವಕರು ಬಂದು ತಡೆದಿದ್ದು ಬೈಕ್ ತಡೆದು ಅಡ್ಡ ಗಟ್ಟಿದ ಪರಿಣಾಮ ಸೈಲೆನ್ಸರ್ ತಗುಲಿ ಬಾಲಕಿಯ ಕಾಲು ಸುಟ್ಟುಹೋದ ಘಟನೆ ನಡೆದಿದೆ.
ಯುವಕರನ್ನು ಯೆಡಪದವಿನ ನಿವಾಸಿಗಳಾದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30) ಎಂದು ತಿಳಿದುಬಂದಿದೆ.
ಟಾಟಾ ಸುಮೋದಲ್ಲಿ ಬಂದು ಅವರನ್ನು ಯುವಕರು ತಡೆದ ಸಂದರ್ಭದಲ್ಲಿಸತ್ತಾರ್ ಬೈಕ್ ಬಿಟ್ಟು ಓಡಿಹೋಗಿದ್ದು ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಇದೀಗ ಅಕ್ರಮ ಗೋಮಾಂಸ ಸಾಗಣೆ ಮಾಡಿದಕ್ಕೆ ಪೊಲೀಸರು ಸುಮೊಟೋ ಪ್ರಕರಣದಲಿಸಿದ್ದು ಈಡಿಗ ಇಬ್ಬರು ಯುವಕರ ವಿರುದ್ಧ ನೈತಿಕ ಪೊಲೀಸ್ ಗಿರಿ ಆರೋಪದ ಹಿನ್ನೆಲೆ ಪ್ರಕರಣ ದಾಖಲಿಸಿದ್ದಾರೆ.


