Saturday, January 17, 2026
Flats for sale
Homeರಾಜ್ಯಹಾವೇರಿ : ಸಿಜರೀನ್ ಮಾಡುವಾಗ ನವಜಾತ ಕೂಸಿನ ತಲೆ ಕೊಯ್ದ ವೈದ್ಯೆ.

ಹಾವೇರಿ : ಸಿಜರೀನ್ ಮಾಡುವಾಗ ನವಜಾತ ಕೂಸಿನ ತಲೆ ಕೊಯ್ದ ವೈದ್ಯೆ.

ಹಾವೇರಿ : ಸಿಜರೀನ್ ಮಾಡುವಾಗ ವೈದ್ಯೆ ಕೂಸಿನ ತಲೆ ಕೊಯ್ದ ಘಟನೆ ಹಾವೇರಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

ನವಜಾತ ಗಂಡು ಶಿಶುವಿನ ಬಲಭಾಗದ ತಲೆಗೆ ಡಾಕ್ಡರ್ ಸ್ವಾತಿ ಬ್ಲೇಡ್ ಹಾಕಿದ್ದು
ನಾಗೇಂದ್ರನಮಟ್ಟಿ ನಿವಾಸಿಗಳಾದ ಮೊಹಮ್ಮದ್ ಮತ್ತು ಬೀಬಿ ಅಪ್ಸಾನ್ ದಂಪತಿಗಳ ಚೊಚ್ಚಲ ಮಗು ಎಂದು ತಿಳಿದುಬಂದಿದೆ.

ಇದು ವೈದ್ಯರ ದೊಡ್ಡ ನಿರ್ಲಕ್ಷ್ಯವಾಗಿದ್ದು ದೊಡ್ಡವರಿಗೆ ಸೂಜಿ ಹಾಕಿಸಿಕೊಳ್ಳೊಕೆ ಹೆದರುತ್ತಾರೆ.ಅಂತಹದರಲ್ಲಿ ಹುಟ್ಟಿದ ಮಗುವಿಗೆ ಎಷ್ಟು ನೋವಾಗಿರಬೇಡ.
ತಪ್ಪಿತಸ್ಥ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಸ್ಪತ್ರೆಯ RMO ಪರಶಪ್ಪ ಚುರ್ಚಿಹಾಳ ಆಗಮಿಸಿ
ಪರಿಶೀಲನೆ ನಡೆದಿದ್ದಾರೆ. ಮಗುವಿನ ಹೆತ್ತವರನ್ನ ವಿಚಾರಿಸಿದ್ದಾರೆ.
ಈ ಬಗ್ಗೆ ಘಟನೆಯ ಸಂಪೂರ್ಣ ಮಾಹಿತಿಯನ್ನು ಪಾಲಕರು ಹೇಳಿದ್ದು
ವೈದ್ಯೆ ಸ್ವಾತಿ ವಿರುದ್ಧ ಮಗುವಿನ ಹೆತ್ತವರು ದೂರು ನೀಡಿದ್ದಾರೆ.

RMO ಕೂಡಲೇ ನೋಟಿಸ್ ಕೊಟ್ಟು ವಿಚಾರಣೆಗೆ ಸೂಚಿಸಿದ್ದು ನನಗೆ ಈಗಾಗಲೇ ಮಾಹಿತಿ ಬಂದಿದೆ.ಆದರೆ ಅದನ್ನೆ ನಂಬೋಕೆ ಆಗೋಲ್ಲ. ಹೊಟ್ಟೆಯಲ್ಲಿ ನೀರು ಹೆಚ್ಚಾಗಿದ್ದಕ್ಕೆ ಗೊತ್ತಾಗಲಿಲ್ಲ ಎಂದಿದ್ದಾರೆ.ಆದರೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೆಂದು ಮಾದ್ಯಮಗಳಿಗೆ ಪ್ರತಿಕ್ರೀಯೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular