ವಿಟ್ಲ ; ಐತಿಹಾಸಿಕ ,ಧಾರ್ಮಿಕ ಹಿನ್ನೆಲೆಯ ಕೋಳಿ ಕಾಳಗಕ್ಕೆ ಪೊಲೀಸ್ ನಿರ್ಬಂಧ ಹಿನ್ನೆಲೆ ಶಾಸಕ ಅಶೋಕ್ ರೈ ತಾನೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ್ದರು. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಈ ಘಟನೆ ನಡೆದಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಕಜಂಬು ಜಾತ್ರೋತ್ಸವ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಕೋಳಿ ಅಂಕ ನಡೆಯುವ ಯಾವುದೇ ಜೂಜು ಕಟ್ಟದೆ ಧಾರ್ಮಿಕ ಹಿನ್ನೆಲೆ ಆಧಾರದಲ್ಲಿ ನಡೆಯುವ ಕೋಳಿ ಅಂಕವಾಗಿದೆ. ಆದರೆ ಕೋಳಿ ಅಂಕ ಮಾಡದಂತೆ ವಿಟ್ಲ ಠಾಣೆ ಪೊಲೀಸರಿಂದ ನಿರ್ಬಂಧ ವಿಧಿಸಿದ್ದು ಖುದ್ದು ಸ್ಥಳಕ್ಕೆ ಬಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈವಯವರು ನಾನು ಇಲ್ಲೆ ಇರ್ತೇನೆ ನೀವು ಕೋಳಿ ಅಂಕ ಮುಂದುವರಿಸಿ ಎಂದು ಪ್ರಚೋದನೆ ನೀಡಿದ್ದಾರೆ.
ಈ ಬಗ್ಗೆ ಪೋಲಿಸರಲ್ಲಿ ಬಂಧನ ಮಾಡುವುದಾದರೆ ಮೊದಲು ನನ್ನನ್ನೆ ಬಂಧಿಸಿ ಎಂದು ವಿಟ್ಲ ಠಾಣೆ ಸಬ್ ಇನ್ಸ್ಪೆಕ್ಟರ್ ಗೆ ಶಾಸಕ ಹೇಳಿದ್ದಾರೆ.ಈ ಬಗ್ಗೆ
ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ, 1960 ರ ಪ್ರಕಾರ ಕೋಳಿ ಅಂಕ ನಡೆಸುವುದು ಕಾನೂನು ಬಾಹಿರ ಎಂದ ಸಬ್ ಇನ್ಸ್ಪೆಕ್ಟರ್ ಹೇಳಿದ್ದು ಇದು ಧಾರ್ಮಿಕ ಹಿನ್ನೆಲೆಯಲ್ಲಿ ನಡೆಯುವ ಕೋಳಿ ಅಂಕ. ಮೇಲಾಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಇದೀಗ ಕಾನೂನು ಬಾಹಿರವಾಗಿ ಕೋಳಿ ಅಂಕವನ್ನು ಮುಂದುವರೆಸಿ ಪ್ರಚೋದನೆ ಮತ್ತು ದುಷ್ರೇರಣೆ ನೀಡಿದ ಹಿನ್ನೆಲೆ ವಿಟ್ಲ ಪೋಲಿಸರು ಶಾಸಕ ಅಶೋಕ್ ರೈ ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು 22 ಕೋಳಿ ಹುಂಜ,ಅಂಕಕ್ಕೆ ಬಳಸುವ ಬಾಳುಗಳನ್ನು ವಶಪಡಿಸಿಕೊಂಡಿದ್ದಾರೆ.


