Friday, January 16, 2026
Flats for sale
Homeದೇಶಬಳ್ಳಾರಿ : ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 4.5 ಕೆಜಿ ಚಿನ್ನ‌ ಕಳವು ಪ್ರಕರಣ,ಬಳ್ಳಾರಿಯ...

ಬಳ್ಳಾರಿ : ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 4.5 ಕೆಜಿ ಚಿನ್ನ‌ ಕಳವು ಪ್ರಕರಣ,ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಬಂಧನ.

ಬಳ್ಳಾರಿ : ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 4.5 ಕೆಜಿ ಚಿನ್ನ‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇರಳ ಎಸ್ ಐ ಟಿ ತಂಡ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ರವರನ್ನು ಬಂಧಿಸಿದ್ದಾರೆ.

ಈ ಹಿಂದೆ ಎಸ್ ಐಟಿ ಬಳ್ಳಾರಿಯ ರೊದ್ದಂ ಜ್ಯುಯಲರ್ಸ್ ಮಾಲಿಕ ಗೋವರ್ಧನ್ ಮನೆ ಹಾಗೂ ಶಾಪ್ ಮೇಲೆ ದಾಳಿ ಮಾಡಿದ್ದು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ನಿಂದ ಗೋವರ್ಧನ್ ಚಿನ್ನ ಖರಿದಿಸಿರುವ ಆರೋಪ ಹಿನ್ನೆಲೆ ಬಂಧಿಸಿದ್ದರು.

ಬರೊಬ್ಬರಿ 4.5 ಕೆಜಿ ಚಿನ್ನ ನಾಪತ್ತೆಯಾಗಿದ್ದು ಸಂಚಲನ ಸೃಷ್ಠಿಸಿತ್ತು ಇದೀಗ ವಿಚಾರಣೆಗೆಂದು ಕರೆಸಿದ ಕೇರಳ ಎಸ್ಐಟಿ ತಂಡ ಬಂಧಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ದೇಗುಲದ ದ್ವಾರ ಪಾಲಕರು ಹಾಗೂ ಬಾಗಿಲು ಮಾಡಿಕೊಟ್ಟಾಗ ಟ್ಯಾಂಪರಿಂಗ್ ಮಾಡಲಾಗಿದ್ದು ಕೇರಳ ಹೈ ಕೊರ್ಟ್ ತನಿಖೆ ವಿಳಂಬದ ಹಿನ್ನೆಲೆ ಎಸ್ ಐ ಟಿ ಮೇಲೆ ಅನುಮಾನ ವ್ಯಕ್ತಪಡಿಸಿತ್ತು,ಹೀಗಾಗಿ ತ್ವರಿತವಾಗಿ ಎಸ್ ಐ ಟಿ ತನಿಖೆ ನಡೆಸುತ್ತಿದ್ದು
ಈಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular