ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಉದ್ಘಾಟನೆಯು ಡಿ. 20 ರಂದು ಸಂಜೆ ಸುಮಾರು 5-00 ಗಂಟೆಗೆ ಮಂಗಳೂರು ನಗರದ ಕರಾವಳಿ ಮೈದಾನದಲ್ಲಿ ನೆರೆವೇರಿಯಲಿದ್ದು ದಿ02-01-2026 ರವರೆಗೆ ಸಂಜೆ ವೇಳೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಸೇರಲಿದ್ದು, ಈ ಸಮಯ ನಗರದ ಕೆಲವೊಂದು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆವಿದೆ .
ಅದರಿಂದ ಲಾಲ್ ಬಾಗ್ ನಿಂದ – ಕರಾವಳಿ ಮೈದಾನದ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸತಕ್ಕದ್ದು.
ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್ ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
-ಉರ್ವ ಮಾರ್ಕೆಟ್ ಮೈದಾನ -(ಕಾರು)
-ಗಾಂಧಿನಗರ ಸರಕಾರಿ ಶಾಲೆ (ಪ್ರೆಸ್ ಕ್ಲಬ್ನ ಬಳಿ) – (ದ್ವಿಚಕ್ರ/ಕಾರು)
-ಲೇಡಿಹಿಲ್ ಚರ್ಚ್ ಪಾರ್ಕಿಂಗ್ – (ದ್ವಿಚಕ್ರ/ಕಾರು)
-ಕೆನರಾ ಸ್ಕೂಲ್ ಮೈದಾನ, ಮಣ್ಣಗುಡ್ಡೆ – (ದ್ವಿಚಕ್ರ/ಕಾರು)
-ತಿಮ್ಮಪ್ಪ ಹೋಟೆಲ್ ಅವರಣ – (ದ್ವಿಚಕ್ರ/ಕಾರು)
-ಸ್ಕೌಟ್ & ಗೈಡ್ ಹಾಲ್ ಅವರಣ (ಕರಾವಳಿ ಮೈದಾನ ಹಿಂಭಾಗ)- (ದ್ವಿಚಕ್ರ)
-ಉರ್ವ ಮಾರ್ಕೆಟ್ ರಸ್ತೆ – (ದ್ವಿಚಕ್ರ)
-ಹ್ಯಾಟ್ ಹಿಲ್ ರಸ್ತೆ – (ದ್ವಿಚಕ್ರ)
ಕಾರ್ಯಕ್ರಮಗಳ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರುವಿನಂತಿಸಿದ್ದಾರೆ.


