Monday, February 2, 2026
Flats for sale
Homeಜಿಲ್ಲೆಮಂಗಳೂರು : ಮರವೂರು ಕೆಂಜಾರು ಬಳಿ ನೂರಾರು ಗೋವುಗಳ ಕಳೇಬರ ಪತ್ತೆ ಪ್ರಕರಣ : ಸ್ಥಳಕ್ಕೆ,ಗೋವನ್ನ...

ಮಂಗಳೂರು : ಮರವೂರು ಕೆಂಜಾರು ಬಳಿ ನೂರಾರು ಗೋವುಗಳ ಕಳೇಬರ ಪತ್ತೆ ಪ್ರಕರಣ : ಸ್ಥಳಕ್ಕೆ,ಗೋವನ್ನ ಕಳೆದುಕೊಂಡವರ ಮನೆಗೆ ವಿಶ್ವ ಹಿಂದೂ ಪರಿಷತ್ ಪ್ರಮುಖರ ಭೇಟಿ.

ಮಂಗಳೂರು : ಮಂಗಳೂರಿನ ಮರವೂರು ಕೆಂಜಾರು ಪ್ರದೇಶದಲ್ಲಿ ವಧೆ ಮಾಡಿದ ಸ್ಥಿತಿಯಲ್ಲಿ ಮೂರು ಗೋವಿನ ಕಳೇಬರ ಪತ್ತೆಯಾಗಿತ್ತು.ಅರಣ್ಯ ಪ್ರದೇಶದಲ್ಲಿ ನೂರಾರು ಗೋವುಗಳ ಹತ್ಯೆ ನಡೆಸಿರುವ ಬಗ್ಗೆ ಹಿಂದೂ ಸಂಘಟನೆಗಳ ಆರೋಪ ಕೇಳಿಬಂದಿದ್ದು ಗೋ ಹತ್ಯೆ ನಡೆಸಿದ ಸ್ಥಳದಲ್ಲೇ ಜೀವಂತ ಒಂದು ದನ,ಎರಡು ಕರು ಪತ್ತೆ.ಅರಣ್ಯ ಪ್ರದೇಶದ ಒಳಗೆ ಹಗ್ಗದಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯ ಕಪಿಲ ಗೋಶಾಲೆಯ ಗೋವುಗಳನ್ನು ಕದ್ದು ತಂದಿರುವ ಸಂಶಯ ವ್ಯಕ್ತವಾಗಿತ್ತು.

ಬಳಿಕ ಸ್ಥಳಕ್ಕೆ ಬಜಪೆ ಠಾಣೆ ಪೊಲೀಸರ ಭೇಟಿ,ಪರಿಶೀಲನೆ ನಡೆಸಿದ್ದು ಗೋಹಂತಕರನ್ನು ಶೀಘ್ರ ಪತ್ತೆ ಹೆಚ್ಚುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹಿಸಿದ್ದರು.ಇದೀಗ ಘಟನಾ ಸ್ಥಳಕ್ಕೆ ಮತ್ತು ಗೋವನ್ನ ಕಳೆದುಕೊಂಡವರ ಮನೆಗೆ ವಿಶ್ವ ಹಿಂದೂ ಪರಿಷತ್ ಪ್ರಮುಖರು ಇಂದು ಭೇಟಿ ನೀಡಿದ್ದಾರೆ, ಶಾಸಕರಾದ ಉಮಾನಾಥ್ ಕೋಟ್ಯಾನ್, ಪ್ರಾಂತ ಬಜರಂಗದಳ ಸಹಸಯೋಜಕರಾದ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಎಡಪದವು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular