ಮೆಕ್ಸಿಕೋ : ಅಮೆರಿಕ ಸುಂಕ ಪ್ರಹಾರದ ಬಳಿಕ ಈಗ ಮೆಕ್ಸಿಕೋ ಕೂಡ ಭಾರತದ ವಿರುದ್ಧ ಟ್ಯಾಕ್ಸ್ ವಾರ್ ಶುರು ಮಾಡಿದ್ದು, ಶೇ.50ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದೆ. ತಮ್ಮೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಎಲ್ಲಾ ದೇಶಗಳ ಮೇಲೂ ಈ ಕ್ರಮ ಕೈಗೊಳ್ಳಲು ಮೆಕ್ಸಿಕೋ ಮುಂದಾಗಿದ್ದು, ಅದರಲ್ಲಿ ಭಾರತ ಕೂಡ ಒಂದಾಗಿದೆ.
ಇದರಿAದಾಗಿ ಭಾರತದ ಮಾರುತಿ ಸುಜುಕಿ, ವೋಕ್ಸ್ವ್ಯಾಗನ್ ಮತ್ತು ಹ್ಯುಂಡೈನAತಹ ಕಂಪನಿಗಳ ರಫುö್ತ ವಹಿವಾಟಿನ ಮೇಲೆ ನೇರ ದುಷ್ಪರಿಣಾಮ ಉಂಟಾಗಲಿದೆ. ಮೆಕ್ಸಿಕೋದ ದೈನಿಕ ‘ಎಲ್ ಯೂನಿವರ್ಸಲ್’ ವರದಿಯ ಪ್ರಕಾರ, ಭಾರತದ ಆಟೋಮೊಬೈಲ್ ಬಿಡಿ ಭಾಗಗಳು ಮತ್ತು ಸಣ್ಣ ಕಾರುಗಳು, ಬಟ್ಟೆ ಮತ್ತು ಜವಳಿ ಉತ್ಪನ್ನಗಳು, ಉಕ್ಕು ಮತ್ತು ಅಲ್ಯೂಮಿನಿಯಂ, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಪ್ಲಾಸ್ಟಿಕ್, ಚರ್ಮದ ವಸ್ತುಗಳು, ಪಾದರಕ್ಷೆಗಳು, ಸೋಪು, ಸುಗಂಧ ದ್ರವ್ಯಗಳು ಮತ್ತು ಕಾಸ್ಮೆಟಿಕ್ಸ್ ಇತ್ಯಾದಿಗಳ ಮೇಲೆ ಮೆಕ್ಸಿಕೋದ ಸುಂಕದ ಬರೆ ಬೀಳಲಿದೆ. ಪ್ರಸ್ತುತ ಭಾರತದಿಂದ ಮೆಕ್ಸಿಕೋಗೆ ರಫ್ತಾಗುವ ಕಾರುಗಳ ಮೇಲೆ 20% ಆಮದು ಸುಂಕವಿದೆ.
ಇದು ಜನವರಿಯಿಂದ ೫೦%ಗೆ ಏರಿಕೆಯಾಗಲಿದೆ. ಫೋಕ್ಸ್ವ್ಯಾಗನ್, ಹ್ಯುಂಡೈ, ನಿಸ್ಸಾನ್ ಮತ್ತು ಮಾರುತಿ ಸುಜುಕಿ ಸೇರಿದಂತೆ ಭಾರತದ ಪ್ರಮುಖ ಕಾರು ರಫುö್ತದಾರರ ಸುಮಾರು 1 ಬಿಲಿಯನ್ ಡಾಲರ್ (ಸುಮಾರು 9,೦೦೦ ಕೋಟಿರೂ.) ಮೌಲ್ಯದ ರಫುö್ತ ವಹಿವಾಟು ಅಪಾಯದಲ್ಲಿ ಸಿಲುಕಲಿದೆ. ಭಾರತದ ಕಾರುಗಳಿಗೆ ದಕ್ಷಿಣ ಆಫ್ರಿಕಾ ಮತ್ತು ಸೌದಿ ಅರೇಬಿಯಾ ನಂತರ ಮೆಕ್ಸಿಕೋ ೩ನೇ ಅತಿದೊಡ್ಡ ರಫುö್ತ ಮಾರುಕಟ್ಟೆಯಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ಉದ್ಯಮ ವಲಯ, ಸುಂಕ ಜಾರಿಗೆ ಮುನ್ನವೇ ಕೇಂದ್ರ ಸರ್ಕಾರವು ಮೆಕ್ಸಿಕೋದೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದೆ. ದೇಶೀಯ ಕೈಗಾರಿಕೆಗಳಿಗೆರಕ್ಷಣೆ ಒದಗಿಸುವುದು ಮತ್ತು ಸ್ಥಳೀಯಉತ್ಪಾದನೆಯನ್ನು ಹೆಚ್ಚಿಸುವುದು ಈ ಸುಂಕ ಹೆಚ್ಚಳದ ಮುಖ್ಯ ಉದ್ದೇಶವಾಗಿದೆ ಎಂದು ಮೆಕ್ಸಿಕೋ ಅಧ್ಯಕ್ಷರಾದ ಕ್ಲೌಡಿಯಾ ಶೀನ್‌ಬಾಮ್
ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಒತ್ತಡವೇ ಕಾರಣ?
ಮುಕ್ತ ವ್ಯಾಪಾರ ಒಪ್ಪಂದ ಹೊಂದಿಲ್ಲದ ದೇಶಗಳ ಮೇಲೆ ಸುಂಕ ವಿಧಿಸಲು ಮೆಕ್ಸಿಕೋಗೆ ಅಮೆರಿಕ ಒತ್ತಡ ಹೇರಿರಬಹುದು. ಮೇಲಾಗಿ, ಮುಂಬರುವ ‘ಅಮೆರಿಕ-ಮೆಕ್ಸಿಕೋ ಕೆನಡಾ ಒಪ್ಪಂದ’ದ ಪರಿಶೀಲನೆಗೂ ಮುನ್ನ ಅಮೆರಿಕವನ್ನು ಸಮಾಧಾನಗೊಳಿಸಲು ಮೆಕ್ಸಿಕೋ ಈ ಕ್ರಮ ಕೈಗೊಂಡಿರಬಹುದುಎAಬುದು ಕೆಲ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಭಾರತದಿಂದ ರಫ್ತಾಗುವ ಕಾರಿನ ಸುಂಕ 50%ಗೆ ಏರಿಕೆ ಯಾಗುವ ಸಾಧ್ಯತೆವಿದ್ದು ಭಾರತದ ಒಂದು ಬಿಲಿಯನ್ ಡಾಲರ್ ಮೌಲ್ಯದ ವಹಿವಾಟಿಗೆ ಕುತ್ತು ಬರುವುದು ಬಹುತೇಕ ನಿಶ್ಚಿತವಾಗಿದೆ.ಜನವರಿ ೧ರಿಂದಲೇ ಜಾರಿಗೆ, ಅದಕ್ಕೂ ಮುನ್ನವೇ ಮಾತುಕತೆ ನಡೆಸಲು ಕೇಂದ್ರಕ್ಕೆ ಉದ್ಯಮಿಗಳ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಯಾವೆಲ್ಲ ದೇಶದ ಮೇಲೆ ತೆರಿಗೆ?
ಭಾರತ, ಚೀನಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದAತಹ ಮುಕ್ತ ವ್ಯಾಪಾರ ಒಪ್ಪಂದ ಆಗಿರದ ದೇಶಗಳಿಂದ ಮೆಕ್ಸಿಕೋಗೆ ಆಮದಾಗುವ ಆಯ್ದ ವಸ್ತುಗಳ ಮೇಲೆ ಶೇಕಡಾ 50 ಸುಂಕ ವಿಧಿಸಲು ಮೆಕ್ಸಿಕೋ ನಿರ್ಧರಿಸಿದೆ.


