ನವದೆಹಲಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡದ್ದಷ್ಟೇ ಅಲ್ಲದೆ, ನೆಹರು ಹಾಗೂ ಇಂದಿರಾ ಗಾಂಧಿ ಕೂಡ ವೋಟ್ ಚೋರಿ ಮಾಡಿದ್ದರು ಎಂಬ ಗಂಭೀರ ಆರೋಪ ಮಾಡಿದರು. ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಗೆಲುವನ್ನೇ ಗುರಿಯಾಗಿಸಿಕೊಂಡು ನಡೆದ ಮತಗಳವಿನ ಬಗ್ಗೆ ವಿವರಿಸಿದ ಶಾ, ದೇಶದಲ್ಲಿ ಮೊದಲ ಬಾರಿಗೆ ಮತ ಕಳ್ಳತನ ನಡೆದಿದ್ದು ದೇಶದ ಮೊದಲ ಪ್ರಧಾನಿಯ ಆಯ್ಕೆಯ ಸಮಯದಲ್ಲಿ ಎಂದು ಹೇಳಿದರು.
ಸ್ವಾತಂತ್ರ್ಯ ನಂತರ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಪ್ರಾಂತ್ಯಗಳ ಕಾಂಗ್ರೆಸ್ ಅಧ್ಯಕ್ಷರುಗಳು ಪ್ರಧಾನಿಯನ್ನು ಆಯ್ಕೆ ಮಾಡಬೇಕಾದ ಸಂದರ್ಭ ಒದಗಿಬಂತು ಮತ್ತು ಮತದಾನವೂ ಆಯಿತು. ಈ ಪೈಕಿ 28 ಮತಗಳು ಸರ್ದಾರ್ ಪಟೇಲರು ಪಡೆದುಕೊಂಡರೆ, ನೆಹರು ಅವರಿಗೆ ಬಂದಿದ್ದು ಕೇವಲ 2 ಮತಗಳು ಮಾತ್ರ. ಆದರೆ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಲಾಯಿತು. ದೇಶದಲ್ಲಿ ನಡೆದ ಮೊದಲ ವೋಟ್ ಚೋರಿ ಇದೇ ಎಂದು ಅಮಿತ್ ಶಾ ಹೇಳಿದರು. ದೇಶದಲ್ಲಿ 2 ನೇ ಸಲ ಮತಗಳವು ಆಗಿದ್ದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ. ನ್ಯಾಯಾ ಲಯವು ಅವರ ರಾಯ್‌ಬರೇಲಿ ಚುನಾವಣೆ ಫಲಿತಾಂಶ ಅಮಾನ್ಯ ಮಾಡಿತ್ತುಆ ನಂತರವೂ ಇಂದಿರಾ ಗಾಂಧಿ ತಮ್ಮಷ್ಟಕ್ಕೆ ತಾವೇ ಆ ಆದೇಶದಿಂದ ವಿನಾಯಿತಿಯನ್ನು ಕೊಟ್ಟು ಅಧಿಕಾರದಲ್ಲಿ ಮುಂದುವರಿದರು. ಇದು ಕೂಡ ವೋಟ್ ಚೋರಿಯೇಎಂದು ಹೇಳಿದರು.
ಮೂರನೇ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದ್ದು, ಅದು ಸೋನಿಯಾ ಗಾಂಧಿ ಅವರು ದೇಶದ ಪೌರತ್ವ ಪಡೆಯುವ ಮೊದಲೇ ಮತಪಟ್ಟಿಯಲ್ಲಿ ಹೆಸರುನೋಂದಾಯಿಸಿಕೊAಡದ್ದಾಗಿದೆ ಎಂದು ಹೇಳಿದರು. ಅಮಿತ್ ಶಾ ಅವರ ಈ ಮೂರೂ ಆರೋಪಗಳಿಗೆ ಸಿಡಿದೆದ್ದ ಕಾಂಗ್ರೆಸ್ ಸದಸ್ಯರಿಂದ ಭಾರಿ ಗದ್ದಲ, ಕೋಲಾಹಲವನ್ನೇ ಸೃಷ್ಟಿಸಿದರು. ಜೊತೆಗೆ, ದೇಶದೊಳಗೆ ಅಕ್ರಮವಾಗಿ ಒಳಗೆ ನುಸುಳಿರುವವರನ್ನು ರಕ್ಷಿಸುವ ಸಲುವಾಗಿ ಎಸ್‌ಐಆರ್‌ಗೆ ವಿರೋಧಿಸಿ 200 ಬಾರಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದರೂ, ಅವರನ್ನು ಇಲ್ಲಿಯೇ ಇರಲು ಬಿಡುವುದಿಲ್ಲ ಎಂದು ಅಮಿತ್ ಶಾಅಬ್ಬರಿಸಿದರು.
ಸ್ವಾತಂತ್ರ್ಯ ನಂತರ ಪ್ರಧಾನಿ ಯಾರಾಗಬೇಕೆಂದು ಸೂಚಿಸಲು ಎಲ್ಲ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರಿAದ ಮತದಾನ ನಡೆಯಿತು. ಸರ್ದಾರ್ ಪಟೇಲ್ 28 ಮತಗಳನ್ನು ಪಡೆದರೆ,ನೆಹರೂಗೆ ದೊರೆತಿದ್ದು ಕೇವಲ 2 ಮತ. ಆದರೂ ನೆಹರೂ ಅವರೇ ಪ್ರಧಾನಿಯಾದರು. 1975 ರ ಚುನಾವಣೆಯಲ್ಲಿ ಅಕ್ರಮ ನಡೆಸಿ ರಾಜನಾರಾಯಣ್ ವಿರುದ್ಧ ಇಂದಿರಾಗಾAಧಿಗೆದ್ದಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅದರಿಂದಾಗಿ ಇAದಿರಾಗಾAಧಿ ತುರ್ತುಪರಿಸ್ಥಿತಿ ಹೇರಿದರು. ಇದು ವೋಟ್‌ಚೋರಿಯ ಎರಡನೇ ಪ್ರಕರಣ ಸೋನಿಯಾ ಗಾಂಧಿ ಈ ದೇಶದ ಪ್ರಜೆ ಆಗುವ ಮೊದಲೇ ಮತಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು ಎನ್ನುವ ಪ್ರಕರಣ ಇನ್ನೂ ನಡೆಯುತ್ತಿದೆ. ಇದು ಮತಗಳ್ಳತನದ ಮೂರನೇ ಪ್ರಕರಣ ಎಂದರು.


