ನವದೆಹಲಿ : ಗೂಗಲ್ ನಂತರ ಇದೀಗ ಮೈಕ್ರೋಸಾಫ್ಟ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಬರೋಬ್ಬರಿ 17.5 ದಶಲಕ್ಷ ಅಮೆರಿಕನ್ ಡಾಲರ್ (ಅಂದಾಜು 1.5 ಲಕ್ಷ ಕೋಟಿ ರೂ.) ಬಂಡವಾಳದೊAದಿಗೆ ಕ್ಲೌಡ್ ಹಾಗೂ ಕೃತಕ ಬುದ್ದಿಮತ್ತೆ (ಎಐ) ಕ್ಷೇತ್ರಗಳ ಸಂಪನ್ಮೂಲ ವೃದ್ಧಿಸುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ಜಾಗತಿಕ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಸತ್ಯ ನಾದೇಳ್ಲಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ ನಂತರ ಈ ಪ್ರಕಟಣೆ ನೀಡಿದ್ದಾರೆ. ಪ್ರಧಾನಿ ಮೋದಿ ಇದನ್ನು ಸ್ವಾಗತಿಸಿದ್ದಾರೆ.
ಈ ವರ್ಷಾರಂಭದಲ್ಲಿ ಮೈಕ್ರೋಸಾಫ್ಟ್ ಹೂಡಿದ್ದ ೩ ಶತಕೋಟಿ ಡಾಲರ್ (24,9೦೦ ಕೋಟಿ ರೂ.) ಸೇರಿ ಮುಂದಿನ 4 ವರ್ಷಗಳವರೆಗೆ ಒಟ್ಟಾರೆ 21 ಶತಕೋಟಿ ಡಾಲರ್ (ಅಂದಾಜು 1.8 ಲಕ್ಷ ಕೋಟಿ) ಭಾರತದಲ್ಲಿ ಹೂಡಿಕೆ ಮಾಡಿದಂತಾಗಿದೆ.ಏಷ್ಯಾ ವಲಯದಲ್ಲೇ ಇದು ಮೈಕ್ರೋಸಾಫ್ಟ್ನ ಅತಿ ದೊಡ್ಡ ಹೂಡಿಕೆಯಾಗಿದೆ. ಕಂಪನಿಗಳ ಜಾಗತಿಕ ವಿಸ್ತರಣೆಗೆ ಭಾರತದ ಪ್ರಾಮುಖ್ಯತೆಯನ್ನು ಎತ್ತಿಹಿಡಿದಂತಾಗಿದೆ.ಸತ್ಯ ನಾದೆಳ್ಳ ಅವರು ತಮ್ಮ ಎಕ್ಸ್ ಖಾತೆಯಲ್ಲಿ `ಭಾರತದ ಎ.ಐ. ಅವಕಾಶಗಳ ಕುರಿತು ಸ್ಫೂರ್ತಿದಾಯಕ ಚರ್ಚೆ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ದೇಶದ ಮಹತ್ವಾಕಾಂಕ್ಷೆಗೆ ಬೆಂಬಲಿಸಲು ಮೈಕ್ರೋಸಾಫ್ಟ್ 17.5 ದಶಲಕ್ಷ ಅಮೆರಿಕನ್ ಡಾಲರ್ ಬೃಹತ್ ಬಂಡವಾಳ ಹೂಡಿಕೆಗೆ ಬದ್ಧವಾಗಿದೆ. ಇದು ಏಷ್ಯಾದಲ್ಲೇ ನಮ್ಮ ಅತಿದೊಡ್ಡ ಹೂಡಿಕೆಯಾಗಿದೆ ಇದರಿಂದ ಭಾರತದಲ್ಲಿ ಕೌಶಲ್ಯಾಭಿವೃದ್ಧಿ, ಸಂಪನ್ಮೂಲ ಅಭಿವೃದ್ಧಿ ಮತ್ತು ಸಾರ್ವಭೌಮತ್ವ ಸಾಮರ್ಥ್ಯದ ವೃದ್ಧಿ ಆಗಲಿದೆ’ ಎಂದು ಬಣ್ಣಿಸಿದ್ದಾರೆ.


