ನವದೆಹಲಿ : ತಮಿಳುನಾಡಿನ ತಿರುಪರನ್ ಕುಂಡ್ರಂ ಬೆಟ್ಟದ ಮೇಲೆ ಕಾರ್ತೀಕ ದೀಪ ಹಚ್ಚಲು ಅನುಮತಿ ನೀಡಿ ತೀರ್ಪು ಕೊಟ್ಟಿರುವ ಸಂಬಂಧವಾಗಿ ಮದ್ರಾಸ್ ಹೈಕೋರ್ಟ್ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆ ವಿಧಿಸಲು ಕೋರಿ ‘ಇಂಡಿಯಾ ಬ್ಲಾಕ್’ನವರು ಮಂಗಳವಾರ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಅರ್ಜಿ ಸಲ್ಲಿಸಿತು.
‘ಇಂಡಿಯಾ ಬ್ಲಾಕ್’ನ 120 ಮಂದಿ ಸಹಿ ಹಾಕಿರುವ ಮನವಿಯನ್ನು ಡಿ.ಎಂ.ಕೆ. ಪಕ್ಷದ ನೇತೃತ್ವದಲ್ಲಿ ಲೋಕಸಭಾ ಸ್ಪೀಕರ್ ಅವರಿಗೆ ಸಲ್ಲಿಸಲಾಯಿತು. ನಿಯೋಗದಲ್ಲಿ ಡಿಎಂಕೆ. ಸಂಸದೀಯ ಪಕ್ಷದ ನಾಯಕಿ ಕನಿಮೋಳಿ, ಲೋಕ ಸಭೆಯಲ್ಲಿ ಪಕ್ಷದ ನಾಯಕನಾಗಿರುವ ಟಿ.ಆರ್. ಬಾಲು, ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಮತ್ತಿತರರು ಹಾಜರಿದ್ದರು. ಸಂವಿಧಾನದ ಆರ್ಟಿಕಲ್ 217 ಮತ್ತು 124 ಅಡಿ ನ್ಯಾಯ ಮೂರ್ತಿಗೆ ವಾಗ್ದಂಡನೆ ವಿಧಿಸಿ ಮದ್ರಾಸ್ ಹೈಕೋರ್ಟಿನಿಂದ ನ್ಯಾ. ಸ್ವಾಮಿನಾಥನ್‌ರನ್ನು ವಜಾ ಮಾಡಬೇಕೆಂದು ಒತ್ತಾಯಿಸಲಾಗಿದೆ.


