ನವದೆಹಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ 1650 ವಿಮಾನಗಳು ಭಾನುವಾರ ಹಾರಾಟ ನಡೆಸಿವೆ. ಆದರೆ ವಿಮಾನ ಹಾರಾಟದಲ್ಲಿ ಸತತ 6vನೇ ದಿನವೂ ಅಡಚಣೆ ಮುಂದುವರಿದಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಸೇರಿದಂತೆದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 650ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, ಸಾವಿರಾರು ಪ್ರಯಾಣಿಕರು ಪರದಾಟ ಇನ್ನೂ ಮುಂದುವರಿದಿದೆ.
ಕಳೆದ ಕೆಲ ದಿನಗಳಿಂದ ತಾಂತ್ರಿಕ ದೋಷ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸಿದರು. ಇಂಡಿಗೋ ಫ್ಲೈಟ್ಸ್ ೨,೩೦೦ ಡೊಮೆಸ್ಟಿಕ್ ಹಾಗೂ ಇಂಟರ್ ನ್ಯಾಷನಲ್ ವಿಮಾನಗಳ ಪೈಕಿ ಭಾನುವಾರ 1,650 ವಿಮಾನಗಳು ಹಾರಾಟ ನಡೆಸಿವೆ.
ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸ ಬೇಕಿದ್ದ ಹಾಗೂ ಇಲ್ಲಿಂದ ಹೊರಡಬೇಕಿದ್ದ 109 ಇಂಡಿಗೋ ವಿಮಾನಗಳು ರದ್ದಾಗಿವೆ. ತೆಲಂಗಾಣದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 115 ವಿಮಾನಗಳು ರದ್ದಾಗಿವೆ. ಚೆನ್ನೈ ವಿಮಾನ ನಿಲ್ದಾಣದಿಂದ 100 ವಿಮಾನಗಳ ಹಾರಾಟ ರದ್ದಾಗಿದ್ದು, ಕೋಲ್ಕತಾದ76, ಪುಣೆಯಲ್ಲಿ 25 ಸೇರಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನ ಹಾರಾಟ ರದ್ದಾಗಿವೆ. ಒಟ್ಟಾರೆ ಭಾನುವಾರ ಶೇ.೩೩ರಷ್ಟು ವಿಮಾನಗಳ ಹಾರಾಟ ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ವಿಮಾನ ವ್ಯತ್ಯಯ ಕಾರಣ ನೀಡುವಂತೆ ಡಿಜಿಸಿಎ ನೋಟಿಸ್ ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯದ ಬಗ್ಗೆ 24 ಗಂಟೆಗಳ ಒಳಗೆ ಸ್ಪಷ್ಟನೆ ನೀಡುವಂತೆ ಕೋರಿ ಇಂಡಿಗೋದ ಸಿಇಒ ಪೀಟರ್ ಎಲ್ಬೆರ್ಸ್ ಮತ್ತು ಏರ್ಲೈನ್ಸ್ ಅಕೌಂಟೆಬಲ್ ಮ್ಯಾನೇಜರ್ ಅವರಿಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆ ಸಂಸದೀಯ ಸಮಿತಿ ಸಹ ಕಾರಣ ಕೇಳಿ ಏರ್ಲೈನ್ಸ್ಉ ನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ
೪೮ ಗಂಟೆಗಳೊಳಗೆ ಪ್ರಯಾಣಿಕ ಹಣ, ಲಗೇಜ್ಗಳನ್ನು ವಾಪಸ್ ಮಾಡುವಂತೆ ಕೇAದ್ರ ಸರ್ಕಾರ ಗಡುವು ವಿಧಿಸಿದ ಬೆನ್ನಲ್ಲೇ ಇಂಡಿಗೋ ಸಂಸ್ಥೆ ಈವರೆಗೂ ದೇಶಾದ್ಯಂತ ಪ್ರಯಾಣಿಕರಿಗೆ 610 ಕೋಟಿ ರೂ. ರೀಫಂಡ್ ಮಾಡಿದೆ. ಅಲ್ಲದೇ ಪ್ರಯಾಣಿಕರ 3೦೦೦ ಲಗೇಜುಗಳನ್ನು ಗುರುತಿಸಿ, ಹಿಂದಿರುಗಿಸಲಾಗಿದೆ. ವಿಮಾನ ಕಾರ್ಯಾಚರಣೆ ಮೇಲೆ ಸಂಪೂರ್ಣ ನಿಗಾ ಇಡಲು ಕಂಟ್ರೋಲ್ ರೂಂ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ.


