Wednesday, December 3, 2025
Flats for sale
Homeಜಿಲ್ಲೆಮಂಗಳೂರು ; ಡಿ. 20 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಉತ್ಸವ 2025-26ರ ಸಂಭ್ರಮ.

ಮಂಗಳೂರು ; ಡಿ. 20 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಉತ್ಸವ 2025-26ರ ಸಂಭ್ರಮ.

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲಾಡಳಿತವು, ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ, ಸಾಂಸ್ಕೃತಿಕ, ಕ್ರೀಡಾ ಮತ್ತು ಮನರಂಜನ ಚಟುವಟಿಕೆಗಳ ಸಮಾಗಮವಾದ ‘ಕರಾವಳಿ ಉತ್ಸವ 2025-26’ ಅನ್ನು ಆಯೋಜಿಸಲು ಸಜ್ಜಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ರವರು ತಿಳಿಸಿದ್ದಾರೆ.

ಈ ಉತ್ಸವವು ಡಿಸೆಂಬರ್ 20, 2025 ರಿಂದ ಜನವರಿ 04, 2026 ರವರೆಗೆ ಕರಾವಳಿ ಉತ್ಸವ ಮೈದಾನ, ಕದ್ರಿ ಪಾರ್ಕ್, ಮತ್ತು ನಗರದ ಸುಂದರ ಕಡಲತೀರಗಳಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಈ ಕಾರ್ಯ ಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನಸಭೆ ಯ
ಸಭಾಧ್ಯಕ್ಷರು ನೆರೆವೆರಿಸಲಿದ್ದಾರೆ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಂಸದರು. ಜಿಲ್ಲೆಯ ಎಲ್ಲಾ ವಿಧಾನಸಭಾ ಶಾಸಕರು, ಎಲ್ಲಾ ಮಾನ್ಯ ವಿದಾನ ಪರಿಷತ್‌ನ ಶಾಸಕರು, ವಿವಿಧ ಅಕಾಡೆಮಿ, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಘನ ಉಪಸ್ಥಿತಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಉತ್ಸವದ ಅವಧಿಯಾದ್ಯಂತ ಕರಾವಳಿ ಉತ್ಸವ ಮೈದಾನದಲ್ಲಿ ವಿವಿಧ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಸಾರ್ವಜನಿಕರಿಗಾಗಿ ಲಭ್ಯವಿರಲಿದೆ.

20/12/2025ರಿಂದ04/01/2026ರವರೆಗೆ ಪ್ರತೀ ಶನಿವಾರ ಮತ್ತು ಭಾನುವಾರದಂದು ಕರಾವಳಿ ಉತ್ಸವ ಮೈದಾನದ ವೇದಿಕೆಯಲ್ಲಿ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. 03/01/2026 ಹಾಗೂ 04/01/2026 ರಂದು ಪಣಂಬೂರು/ತಣ್ಣೀರುಬಾವಿ/ಸಸಿಹಿತ್ತು ಕಡಲತೀರಗಳಲ್ಲಿ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನ ಖ್ಯಾತ ಕಲಾವಿದರಿಂದ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಯಲಿದೆ.ಉತ್ಸವದ ಮುಂದುವರಿದ ಭಾಗವಾಗಿ, ಜನವರಿ ಮತ್ತು ಫೆಬ್ರವರಿಯಲ್ಲಿ ವಿಶೇಷ. ಆಕರ್ಷಣೆಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದ ವಿವರ….

ಡಿ.25 ನಂತರ ಪಣಂಬೂರು ಕಡಲ ತೀರದಲ್ಲಿ ಕೋನೆಯ ವಾರ ವೈನ್ – ಚೀಸ್- ಕೇಕ್ ಫೆಸ್ಟ್ ನಡೆಯಲಿದೆ.09-01-2026 ರಿಂದ 11/01/2026 ವರೆಗೆ ಕದ್ರಿ ಪಾರ್ಕ್ ರೋಡ್ ನಲ್ಲಿ ಚಿತ್ರ ಶಿಲ್ಪ ನೃತ್ಯ ಮೇಳ ನಡೆಯಲಿದೆ.26/01/2026 ರಂದು ತೋಟಗಾರಿಗೆ ಇಲಾಖೆ ವತಿಯಿಂದ ಕದ್ರಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. 09/01/2026 ರಿಂದ 11/01/20 26 ರ ವರೆಗೆ ತಪಸ್ಸ ಫೌಂಡೇಷನ್ ವತಿಯಿಂದ ಟ್ರಯತ್ಲಾನ್ ಕಾರ್ಯಕ್ರಮ.ಹಾಗೂ 17/01 ರಿಂದ 18 ರ ವರೆಗೆ ಗಾಳಿಪಟ ಉತ್ಸವ ನಡೆಯಲಿದೆ. 23/01 ರಿಂದ 25 ರ ವರೆಗೆ ಚೀಚ್ ಉತ್ಸವ ನಡೆಯಲಿದೆ. 30-01-2026 ರಿಂ 31 ರ ವರೆಗೆ ಕದ್ರಿ ಪಾರ್ಕ್ ನಿಂದ ಲೇಡಿಲ್ ವರೆಗೆ ಫುಡ್ ಫೆಸ್ಟಿವಲ್ ನಡೆಯಲಿದೆ.

ಜನವರಿ 26 ರ ಕೊನೆಯ ವಾರದಲ್ಲಿ ನಗರದ ಕೇಂದ್ರ ಗ್ರಂಥಾಲಯಗಳಲ್ಲೊ ಬುಕ್ ಫೇಸ್ಟ್, ಹಾಗೂ ಫೆಬ್ರವರಿಯ ಕೊನೆಯ ವಾರದಲ್ಲಿ ಬಿಗ್ ಸಿನಿಮಾ ಭಾರತ್ ಮಾಲ್ ಗಳಲ್ಲಿ ಫಿಲ್ಮ್ ಫೆಸ್ಟಿವಲ್ ,ಫೆ.14 ರಂದು ಡಾಗ್ ಶೋ,ಹಾಗೂ ಉತ್ಸವದ ಮೊದಲನೆಯ ದಿನ ಪ್ರತಿ ಶನಿವಾರ ಹಾಗೂ ಭಾನುವಾರ ಸಹ್ಯಾದ್ರಿ ಕಾಲೇಜು ಮೈದಾನದಿಂದ ಕರಾವಳಿ ಉತ್ಸವದ ಕೊನೆಯವರೆಗೆ ಹೆಲಿರೈಡ್ ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular