Sunday, January 25, 2026
Flats for sale
Homeದೇಶಅಯೋಧ್ಯೆ : ರಾಮಾಯಣ, ಮಹಾ ಭಾರತದ ಕಾಲದ ಇತಿಹಾಸವಿರುವ ಬಳಿಕ ಕಣ್ಣರೆ ಆಗಿದ್ದ ಧ್ವಜ ಮತ್ತೆ...

ಅಯೋಧ್ಯೆ : ರಾಮಾಯಣ, ಮಹಾ ಭಾರತದ ಕಾಲದ ಇತಿಹಾಸವಿರುವ ಬಳಿಕ ಕಣ್ಣರೆ ಆಗಿದ್ದ ಧ್ವಜ ಮತ್ತೆ ಮುನ್ನೆಲೆಗೆ.

ಅಯೋಧ್ಯೆ : ರಾಮಮಂದಿರದ ಮೇಲೆ ಹಾರಿ ಸಲಾಗಿರುವ ಧ್ವಜಕ್ಕೆ ರಾಮಾಯಣ, ಮಹಾ ಭಾರತದ ಕಾಲದ ಇತಿಹಾಸವಿರುವ ಬಗ್ಗೆ ಇತಿಹಾಸತಜ್ಞ ಲಲಿತ್ ಮಿಶ್ರಾ ಬೆಳಕು ಚೆಲ್ಲಿದ್ದಾರೆ. ಮೇವಾರದ ಚಿತ್ರಕಲಾ ರಾಮಾಯಣದಲ್ಲಿ ಕೋವಿದಾರ ವೃಕ್ಷದ ಚಿತ್ರ ಕಂಡುಬಂತು. ನಂತರ ವಾಲ್ಮೀಕಿ ರಾಮಾಯಣವನ್ನು ಹುರ ಅಲ್ಲಿಯೂ ಇದರ ಉಲ್ಲೇಖವಿರುವುದು ತಿಳಿ ಯಿತು. ರಾಮಾಯಣ ಕಾಲದಲ್ಲಿ ಚಾಲ್ತಿಯಲ್ಲಿದ್ದ ಧ್ವಜ ಮಹಾಭಾರತ ಯುದ್ದದ ನಂತರ ಜನಮಾ ನಸದಿಂದ ಮರೆಯಾಯಿತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಋಷಿ ಕಶ್ಯಪರು ಮಂದಾರ ಮತ್ತು ಪಾರಿಜಾತ ಗಿಡಗಳ ಕಸಿ ಮಾಡಿ ಕೋವಿದಾರ ವೃಕ್ಷವನ್ನು ಅಭಿವೃದ್ಧಿ ಪಡಿಸಿದರು. ಕಾಳಿದಾಸ ಕಾವ್ಯದಲ್ಲಿಯೂ ಇದರ ವರ್ಣನೆಯಿದೆ. ಸೂರ್ಯ ಮತ್ತು ಕೋವಿದಾರ ವೃಕ್ಷದ ಚಿತ್ರವುಳ್ಳ ಧ್ವಜವನ್ನು ಅಯೋಧ್ಯೆಯಲ್ಲಿ

ಬಳಸಲಾಗುತ್ತಿತ್ತು. ಮಹಾಭಾರತ ಯುದ್ಧ ನಡೆಯುವಾಗ ಅಯೋಧ್ಯೆಯ ದೊರೆ ಬೃಹದ್ಬಲ ಭಾಗವಹಿಸಿದ್ದ. ಯುದ್ಧದಲ್ಲಿ ಆತ ಮರಣಿಸಿದ ಬಳಿಕ ಅಯೋಧ್ಯೆ ನಶಿಸಿತು, ಧ್ವಜದ ಕಲ್ಪನೆಯೂ ಕಣ್ಮರೆಯಾಯಿತು. ಈಗ ಮತ್ತೆ ಅದು ಮುನ್ನೆಲೆಗೆ ಬಂದಿರುವುದು ಸಂತೋಷ ತಂದಿದೆ’ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular