ಹುಬ್ಬಳ್ಳಿ ; ಬೆಂಗಳೂರಿನಲ್ಲಿ ₹7.11ಕೋಟಿ ದರೋಡೆ ಪ್ರಕರಣ ಮಾಸುವ ಮುನ್ನ ಹುಬ್ಬಳ್ಳಿಯಲ್ಲಿ ಇನ್ನೊಂದು ಘಟನೆ ನಡೆದಿದೆ.ಇಡಿ ಅಧಿಕಾರಿ ಸೋಗಿನಲ್ಲಿ ಸುಮಾರು 3 ಕೋಟಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.


ಹುಬ್ಬಳ್ಳಿಯ ರೇಣುಕಾ ವಸತಿ ಗೃಹ ಬಳಿ ಒಂದು ಗಂಟೆಗಳ ಕಾಲ ವಿಚಾರಣೆ ನೆಪದಲ್ಲಿ ಖದೀಮರು ಬೆದರಿಕೆ ಹಾಕಿದ್ದು ಇಡಿ, ಐಟಿ ಅಧಿಕಾರಿಗಳ ಸೋಗಿನಲ್ಲಿ ತಂಡವೊಂದು ಸುಮಾರು 3 ಕೋಟಿ ಚಿನ್ನಾಭರಣ ದೋಚಿಕೊಂಡು ಪರಾರಿ ಆಗಿದ್ದಾರೆ ಎಂದು ಹುಧಾ ಪೊಲೀಸ್ ಕಮೀಷನರೇಟ್ ಡಿಸಿಪಿ ಮಲ್ಲಿಕಾರ್ಜುನ ನಂದಗಾಂವಿ ಹೇಳಿದ್ದಾರೆ.
ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಪನಗರ ಹಾಗೂ
ಸಿಸಿಬಿಗೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿ ವಿಚಾರಣೆ ನಡೆಸುವ ನೆಪದಲ್ಲಿ 2 ಕೆ.ಜಿ 942 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ನಗದು ದೋಚಿದ್ದಾರೆ.
ನಗರದ ಚನ್ನಮ್ಮ -ವೃತ್ತದ ಬಳಿಯ ನೀಲಿಜಿನ್ ರಸ್ತೆಯಲ್ಲಿ ರೇಣುಕಾ ವಸತಿ ಗೃಹದಲ್ಲಿ ಘಟನೆ ಮೊದಲು ಮಾತುಕತೆ ಆಗಿದ್ದು ವ್ಯಾಪಾರಿಗೆ ಗೊತ್ತಿರುವ ವ್ಯಕ್ತಿಗಳೇ ಚಿನ್ನಾಭರಣ ದೋಚಿದ್ದಾರೆಂದು ಶಂಕಿಸಲಾಗಿದೆ.
ಈ ಬಗ್ಗೆ ನಗದು ದೋಚಿರುವ ಅನುಮಾನವಿದ್ದು. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ ವ್ಯಾಪಾರಿ ಸುದೀನ್ ಎಂ.ಆರ್ ಅವರು ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುತ್ತಿದ್ದರು ನ. 15 ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ ಅವರ ಜತೆ ಬರುವಾಗ ಚೈನ್, ಬ್ರೆಸ್ಲೆಟ್, ಉಂಗುರ, ತಂದಿದ್ದರು ಎಂದು ತಿಳಿದುಬಂದಿದೆ.


