Wednesday, December 3, 2025
Flats for sale
Homeಸಿನಿಮಾಮಂಗಳೂರು : ಪ್ರೇಕ್ಷಕರಲ್ಲಿ ಇನ್ನಷ್ಟೂ ಕುತೂಹಲ ಮೂಡಿಸಿರುವ ಅಪರೇಷನ್ ಲಂಡನ್ ಕೆಫೆ ಕನ್ನಡ ಚಿತ್ರ ನ.28...

ಮಂಗಳೂರು : ಪ್ರೇಕ್ಷಕರಲ್ಲಿ ಇನ್ನಷ್ಟೂ ಕುತೂಹಲ ಮೂಡಿಸಿರುವ ಅಪರೇಷನ್ ಲಂಡನ್ ಕೆಫೆ ಕನ್ನಡ ಚಿತ್ರ ನ.28 ರಂದು ರಾಜ್ಯಾದ್ಯಂತ ಭರ್ಜರಿ ಬಿಡುಗಡೆ.

ಮಂಗಳೂರು : “ಬಹು ನಿರೀಕ್ಷಿತ ಮಾಸ್ ಮತ್ತು ಆಕ್ಷನ್ ಪೋಸ್ಟರ್ಸ್, ಟೀಸರ್, ಟ್ರೈಲರ್ ಹಾಗೂ ರೈ ರೈ ರೈ ಅದ್ಭುತ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟೂ ಕುತೂಹಲ ಮೂಡಿಸಿರುವ ಅಪರೇಷನ್ ಲಂಡನ್ ಕೆಫೆ ಕನ್ನಡ ಚಿತ್ರವು ಇದೇ ನವೆಂಬ‌ರ್ 28ರಂದು ಏಕಕಾಲಕ್ಕೆ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ” ಎಂದು ನಟ ಅರ್ಜುನ್ ಕಾಪಿಕಾಡ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

“ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ಚಿತ್ರಕ್ಕೆ ಸಾಕಷ್ಟು ಬಂಡವಾಳ ಹಾಕಿ ಸಿನಿಮಾ ಮಾಡಿದ್ದಾರೆ. ಮರಾಠಿ ಭಾಷೆ ಬಾರದೆ ಇದ್ರೂ ಯಾವುದೇ ಸಮಸ್ಯೆಯಾಗದಂತೆ ನಟಿಸಲು ಸಹಕಾರ ನೀಡಿದ್ದಾರೆ. ತುಳುವರು ನನ್ನನ್ನು ಬೆಳೆಸಿದ್ದಾರೆ. ಅದೇ ಪ್ರೀತಿ ಈ ಕನ್ನಡ ಸಿನಿಮಾಕ್ಕೂ ಇರಲಿ“ ಎಂದರು.

ನಟ ಕವೀಶ್ ಶೆಟ್ಟಿ ಮಾತಾಡಿ, ”ಚಿತ್ರದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಚಿತ್ರತಂತ ತೊಡಗಿಸಿಕೊಂಡಿದ್ದು ಕರ್ನಾಟಕ ಮತ್ತು ಮಹಾರಾಷ್ಟ್ರದೆಲ್ಲೆಡೆ ವಿವಿಧ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ ಅವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ ಪ್ರಕಾಶ್ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಲಾಂಛನದ ಅಡಿಯಲ್ಲಿ ಬಹಳ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸಡಗರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜಿಲ್ಕಾ ಸಿನಿಮಾದಲ್ಲಿ ಅಭಿನಯಿಸಿದ್ದ ನಾನು ಈ ಸಿನಿಮಾದಲ್ಲಿ ವಿಭಿನ್ನ ಸಾಹಸಗಳ ಮೂಲಕ ಪ್ರೇಕ್ಷಕರ ಮನಮುಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ“ ಎಂದರು.

ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ಮಾತಾಡಿ, ”ನಟಿ ಮೇಘಾ ಶೆಟ್ಟಿ ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಹಾಡು, ಡ್ಯಾನ್ಸ್ ಮತ್ತು ಟ್ರೇಲರ್ನಲ್ಲಿ ಲಂಗ ದಾವಣಿ ತೊಟ್ಟು ಅಪ್ಪಟ ಬಜಾರಿ ಹಳ್ಳಿ ಹುಡುಗಿಯಂತೆ ತರ್ಲೆ ಮಾಡುತ್ತಾ ತನ್ನ ನಟನೆಯ ಇನ್ನೊಂದು ಮಜಲನ್ನು ಪ್ರೇಕ್ಷಕರಿಗೆ ತಿಳಿಯಪಡಿಸಿದ್ದಾರೆ.

ತುಳು ಚಿತ್ರರಂಗದ ಹೆಸರಾಂತ ನಟ ಅರ್ಜುನ್ ಕಾಪಿಕಾಡ್ ಈ ಚಿತ್ರದಲ್ಲಿ ಒಬ್ಬ ಖಡಕ್ ಆರ್ಮಿ ಆಫೀಸರ್ ಪಾತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ.
ಹಾಗೆ ಮರಾಠಿ ಚಿತ್ರರಂಗದ ಹೆಸರಾಂತ ನಟಿ ಶಿವಾನಿ ಸುರ್ವೆಯ ಜೊತೆ ಅದೇ ಮರಾಠಿಯ ವಿರಾಟ್ ಮಡ್ಕ, ಪ್ರಸಾದ್ ಖಾಂಡೇಕ‌ರ್ ಮುಂತಾದವರು ವಿಭಿನ್ನವಾದ ಚಾಲೆಂಜಿಂಗ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಕನ್ನಡದ ಚಿರಪರಿಚಿತ ಬಿ. ಸುರೇಶ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವಥ್, ಧರ್ಮೇಂದ್ರ ಅರಸ್ ಜೊತೆಯಲ್ಲಿ ಇನ್ನೂ ಹೆಸರಾಂತ ಕನ್ನಡ ಮತ್ತು ಮರಾಠಿಯ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ“ ಎಂದರು.
ಮುಂಬೈ ಮೂಲದ ಪಾಂಶು ಝಾ ಸಂಗೀತವಿರುವ ಈ ಚಿತ್ರದಲ್ಲಿ ಆರ್. ಡಿ. ನಾಗಾರ್ಜುನ್ ಛಾಯಾಗ್ರಹಣ, ವರದರಾಜ್ ಕಾಮತ್ ಕಲೆ, ವಿಕ್ರಂ ಮೊರ್, ಮಾಸ್ ಮಾದ ಮತ್ತು ಅರ್ಜುನ್ ರಾಜ್ ಸಾಹಸ. ಕವಿರಾಜ್, ಡಾ. ನಾಗೇಂದ್ರ ಪ್ರಸಾದ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯವಿದೆ. ಅನಿರುದ್ ಶಾಸ್ತ್ರಿ, ಬ್ರಿಜೇಶ್ ಶಾಂಡಿಲ್ಯ, ಐಶ್ವರ್ಯ ರಂಗರಾಜನ್, ಪ್ರಥ್ವಿ ಭಟ್ ಮತ್ತು ಶ್ರೀ ಲಕ್ಷ್ಮೀ ಬೆಳ್ಳಣ್ಣು ಸಾಹಿತ್ಯಕ್ಕೆ ಇಂಪಾದ ಸ್ವರ ಸೇರಿಸಿದ್ದಾರೆ. ವಿನಾದ್ ಮ್ಯೂಸಿಕ್ ಲಾಂಛನದ ಅಡಿಯಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಈ ಚಿತ್ರದ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಯ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಟೆಂಡಿಂಗ್ ನಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular