ಮೈಸೂರು : ಮೈಸೂರಿನ ನಂಜನಗೂಡಿನಲ್ಲಿ ಮತ್ತೆ ಲಾಂಗು ಮಚ್ಚು ಝಳಪಿಸಿದೆ.ರೌಡಿ ಶೀಟರ್ ಧನರಾಜ್ ಭೋಲಾ ಮೇಲೆ ಅಟ್ಯಾಕ್ ಮಾಡಲಾಗಿದೆ.10 ಜನರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.ನಂಜನಗೂಡು ಪಟ್ಟಣದ ಶಂಕರಪುರ ಬಡಾವಣೆ ಬಳಿ ನಡೆದಿದೆ.ನಂಜನಗೂಡು ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಭಾಮೈದ ರಘು ಮತ್ತು ಕಾರ್ತಿಕ್ ಹಾಗೂ ಇತರರು ಅಟ್ಯಾಕ್ ಮಾಡಿದ್ದಾರೆ.
ಬೈಕ್ ನಲ್ಲಿ ಬರುತ್ತಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ.ಧನರಾಜ್ ಭೋಲಾ ನ ಬೆರಳುಗಳು ಕಟ್ ಆಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ರಘು ಹಾಗೂ ಕಾರ್ತಿಕ್ ಎಂಬುವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ವೈಯುಕ್ತಿಕ ಕಾರಣಕ್ಕೆ ಧ್ವೇಷ ಬೆಳೆಸಿಕೊಂಡು ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.ಉಳಿದ ಆರೋಪಿಗಳ ಸೆರೆಗೆ ನಂಜನಗೂಡು ಪೊಲೀಸರು ಬಲೆ ಬೀಸಿದ್ದಾರೆ.ಧನರಾಜ್ ಭೋಲಾಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


