ಬೆಳಗಾವಿ : ಗಳಲೆ ಸಾಂಕ್ರಾಮಿಕ ರೋಗದ ಭೀತಿ ಮಧ್ಯೆ ಜಾನುವಾರುಗಳಿಗೆ ಗಂಟಲು ಬೇನೆ,ಕಾಲುಬೇನೆ ರೋಗದ ಆತಂಕ ಸುರುವಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಹೆಚ್ಚಾಗಿದೆ.

ಮುಂಜಾಗ್ರತಾ ಕ್ರಮಕ್ಕೆ ಮುಂದಾಗಾದ ಪಶುಸಂಗೋಪನೆ ಇಲಾಖೆ ವಿರುದ್ಧ ರೈತರ ಆಕ್ರೋಶ ಹೊರಹಾಕಿದ್ದು ಸಾಂಕ್ರಾಮಿಕ ರೋಗದ ಆತಂಕದ ನಡುವೆ ರೈತರಿಗೆ ಮತ್ತೊಂದು ಸಂಕಷ್ಟ ಸುರುವಾಗಿದೆ.
31ಕೃಷ್ಣ ಮೃಗಗಳ ಸಾವಿನ ಬಳಿಕವೂ ಮುಂಜಾಗ್ರತಾ ಕ್ರಮಕ್ಕೆ ಪಶುಸಂಗೋಪನೆ ಇಲಾಖೆ ಮುಂದಾಗದ ಹಿನ್ನೆಲೆ ಬೆಳಗಾವಿ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರ ವಿರುದ್ಧ ರೈತರ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರ ಆಕ್ರೋಶ ಹೊರಹಾಕಿದ್ದಾರೆ.
31ಕೃಷ್ಣ ಮೃಗಗಳ ಸಾವಿನ ನಂತರವೂ ಜಾನುವಾರಗಳ ರಕ್ಷಣೆಗೆ ಪಶುಸಂಗೋಪನೆ ಇಲಾಖೆ ಮುಂದಾಗಿಲ್ಲ,ರಾಜ್ಯದಲ್ಲಿ ಮಂಡ್ಯ, ಮೈಸೂರು ಶಿವಮೊಗ್ಗ, ಬೆಳಗಾವಿ ಜಿಲ್ಲೆಯಲ್ಲಿ ಕಾಲುಬೇನೆ, ಗಂಟಲು ಬೇನೆಗೆ ಜಾನುವಾರುಗಳ ಸಾವಾಗುತ್ತಿವೆ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದ್ರೂ ಚಿಕಿತ್ಸೆ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.


