ತುಮಕೂರು ; ಲಾಂಗ್ ಹಿಡಿದು ಓಡಾಡಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ.
ದೇವರಾಜು ಬಂಧನಕ್ಕೊಳಗಾದ ವ್ಯಕ್ತಿ.
ಈ ವ್ಯಕ್ತಿ ಮದ್ಯಪಾನ ಮಾಡಿ ಲಾಂಗ್ ಹಿಡಿದು ಗ್ರಾಮಸ್ಥರನ್ನು ಭಯಗೊಳಿಸುತ್ತಿದ್ದು ಲಾಂಗ್ ಹಿಡಿದು ಓಡಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ದೇವರಾಜು ಪ್ರತಿನಿತ್ಯ ಮದ್ಯಪಾನ ಮಾಡಿಕೊಂಡು ಲಾಂಗ್ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಕಿರುಚಾಡುತ್ತಿದ್ದು ದೇವರಾಜನನ್ನ ಬಂಧಿಸುವಂತೆ ತುಮಕೂರು ಎಸ್ಪಿ ಅಶೋಕ್ ಸೂಚನೆ ನೀಡಿದ್ದು ಮಿಡಿಗೇಶಿ ಪೊಲೀಸರಿಂದ ದೇವರಾಜು ಬಂಧನವಾಗಿದೆ.


