Wednesday, November 19, 2025
Flats for sale
Homeದೇಶನವದೆಹಲಿ : ದೆಹಲಿ ಸ್ಫೋಟದ ಟೆರರ್ ಡಾಕ್ಟರ್ ಶಾಹಿನಾಳ ಶಿಷ್ಯೆ ಜೂಲೈ ತಿಂಗಳಲ್ಲೇ ಬೆಂಗಳೂರಿನಲ್ಲಿ ಬಂಧನ.

ನವದೆಹಲಿ : ದೆಹಲಿ ಸ್ಫೋಟದ ಟೆರರ್ ಡಾಕ್ಟರ್ ಶಾಹಿನಾಳ ಶಿಷ್ಯೆ ಜೂಲೈ ತಿಂಗಳಲ್ಲೇ ಬೆಂಗಳೂರಿನಲ್ಲಿ ಬಂಧನ.

ನವದೆಹಲಿ : ಕೆಂಪು ಕೋಟೆ ಕಾರು ಸ್ಫೋಟದ ಬಳಿಕ ಬೆಂಗಳೂರಿನ ನಂಟು ಹೊಂದಿದ್ದ ಉಗ್ರ ಸಂಗತಿಯೊAದು ಹೊರ ಬಿದ್ದಿದೆ. ದೆಹಲಿ ಸ್ಫೋಟದ ರುವಾರಿ, ಭಾರತದಲ್ಲಿ ಜೈಶ್ ಉಗ್ರ ಸಂಘಟನೆಯ ಮಹಿಳಾ ವಿಂಗ್ ಕಟ್ಟಿ ಬೆಳೆಸಲು ಪಣತೊಟ್ಟಿದ್ದ ಲಖನೌ ವೈದ್ಯ ಭಯೋತ್ಪಾದಕಿ ಶಾಹಿನಾಳ ಶಿಷ್ಯೆಯೊಬ್ಬಳು ಜುಲೈನಲ್ಲೇ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಹೌದು, ಟೆರರ್ ಡಾಕ್ಟರ್ ಶಾಹಿನ್ ಸಾಹೀದ್ ಶಿಷ್ಯೆ ಪರ್ವೀನ್ ಅನ್ಸಾರಿಯನ್ನು ಜುಲೈನಲ್ಲಿ ಗುಜರಾತ್ ಎಟಿಎಸ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

ಕಳೆದ ವರ್ಷ ಬೆಂಗಳೂರಿನ ದಿ. ರಾಮೇಶ್ವರಂ ಕೆಫೆ ಸ್ಫೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಐಎಸ್‌ಐಎಸ್ ಮಾಡ್ಯೂಲ್‌ಗಳ ಮಂಗಳೂರು ಕುಕ್ಕರ್ ಸ್ಫೋಟ ಹಾಗೂ ಬಳ್ಳಾರಿ ಜಿಲ್ಲೆಯ ಐಟಿಐ ಮೈದಾನದಲ್ಲಿ ಸ್ಫೋಟಕ್ಕೆ ಯತ್ನ ನಡೆಸಿದ ಸಂಚಿನ ನಂಟನ್ನು ಈ ಪರ್ವೀನ್ ಅನ್ಸಾರಿ ಹೊಂದಿದ್ದಳು ಎಂದು ಗೊತ್ತಾಗಿದೆ. ಜತೆಗೆ ಬೆಂಗಳೂರಿನಲ್ಲಿ ಅಲ್-ಹಿಂದ್ ಸಂಘಟನೆ ಭಯೋತ್ಪಾದನೆಗೆ ಸಂಚು ರೂಪಿಸಿದ್ದೂ ತಿಳಿದು ಬಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಉತ್ತರದ ಇತರೆ ರಾಜ್ಯಗಳಲ್ಲಿ ಉಗ್ರರ ಕಾರ್ಯವಿಧಾನಗಳ ಪಟ್ಟಿಯನ್ನು ಗುಪ್ತಚರ ಇಲಾಖೆ ೬ ತಿಂಗಳ ಮುಂಚೆಯೇ ತಯಾರಿಸಿತ್ತು.

ದಿ. ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನ ವೈದ್ಯೆ ಭಯೋತ್ಪಾದಕಿ ಶಾಹಿನ್ ಸಾಹೀದ್ ಬೆಂಗಳೂರಿಗೆ ಭೇಟಿ ನೀಡಿದ್ದಳು. ಈ ಸಂದರ್ಭದಲ್ಲಿ ಪರ್ವೀನ್ ಮತ್ತು ಇನ್ನಿತರರ ಜತೆ ಚರ್ಚೆ ನಡೆಸಿದ್ದು, ದಕ್ಷಿಣ ರಾಜ್ಯಗಳಲ್ಲಿ ಮಹಿಳೆಯರನ್ನು ಸಂಘಟನೆಗೆ ನೇಮಕ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚರ್ಚೆ ಮಾಡಿದ್ದಳು ಎಂದು ತಿಳಿದುಬಂದಿದೆ. ಇದೇ ವೇಳೆ ಹಲವು ಸಲಹೆಗಳನ್ನೂ ನೀಡಿದ್ದಳು ಎಂದು ಗೊತ್ತಾಗಿದೆ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಹಿಳಾ ಉಗ್ರ ಸಂಘಟನೆಗಳನ್ನು ಬಲಗೊಳಿಸುವ ಸಲುವಾಗಿ ಜಾರ್ಖಂಡ್‌ನಿAದ ಬಂದು ಬೆಂಗಳೂರಿನಲ್ಲಿ ನೆಲೆಗೊಂಡಿದ್ದ ಪರ್ವೀನ್ ಸಮಾ ಅನ್ಸಾರಿ, ಬೆಂಗಳೂರು ಸೇರಿದಂತೆ ದಕ್ಷಿಣದ ಅನೇಕ ಕಡೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ಹೂಡಿದ್ದಳು. ಸಂಘಟನೆಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಕೆಲಸವನ್ನು ಪರ್ವೀನ್ಸ ಮಾಗೆ ವಹಿಸಲಾಗಿತ್ತು. ಪರ್ವೀನ್ ಅಲ್ಲದೇ ಸಂಘಟನೆಯ ಹಲವು ಮಹಿಳೆಯರು ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೂ ಸಹ ಸಂಘಟನೆಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿದ್ದರು ಎಂಬ ಮಾಹಿತಿ ಈಗ ಹೊರಬಂದಿದೆ.

ಪರ್ವೀನ್ ಅನ್ಸಾರಿ ಜತೆಗೆ ರಾಜ್ಯದ ಮಹಿಳೆಯರ ಸಂಪರ್ಕವಿತ್ತೆ? ರಾಜ್ಯದಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದರೇ? ಎನ್ನುವ ಬಗ್ಗೆ ಪೊಲೀಸರು ಶೋಧ ನಡೆಸಿದ್ದಾರೆ. ಅಲ್ಲದೇ ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೂ ಸಹ ಶೋಧ ನಡೆದಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular