ಮಂಗಳೂರು : ಮಂಗಳೂರಿನ ನಂದಿಗುಡ್ಡ ಕೊರಗಜ್ಜ ಸಾನಿಧ್ಯದಲ್ಲಿ ಕೊರಗಜ್ಜ ಚಿತ್ರ ತಂಡದಿಂದ ಅದ್ದೂರಿ ಹರಕೆಯ ಕೋಲ ಸೇವೆ ನಡೆದಿದೆ.ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಶ್ರುತಿ,ಭವ್ಯ,ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಭಾಗಿಯಾಗಿದ್ದರು.ಜೊತೆಗೆ ಅಜ್ಜನ ಕೋಲ ಸೇವೆಯನ್ನು ಸುಮಾರು1500 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಕಣ್ತುಂಬಿಕೊಂಡಿದ್ದಾರೆ.








ಬಹುನಿರೀಕ್ಷಿತ ಕೊರಗಜ್ಜ ಚಿತ್ರದ ಯಶಸ್ಸಿಗಾಗಿ ಚಿತ್ರ ತಂಡ ಹರಕೆ ಹೇಳಿದ್ದು 6 ಭಾಷೆಗಳಲ್ಲಿ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆಯಾಗಲು ಸಿದ್ಧವಾಗಿದೆ. ‘ಕೊರಗಜ್ಜ’ ಸಿನಿಮಾದಲ್ಲಿ ಶ್ರುತಿ, ಭವ್ಯ, ಕಬೀರ್ ಬೇಡಿ ಮುಂತಾದ ಕಲಾವಿದರು ಅಭಿನಯಿಸಿದ್ದು ಸುಧೀರ್ ಅತ್ತಾವರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಸಕ್ಸಸ್ ಫಿಲ್ಮ್ಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದ್ದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಕೆಲಸ ಮಾಡಿದ್ದಾರೆ. ತುಳು,ಕನ್ನಡ, ಹಿಂದಿ,ತಮಿಳು, ತೆಲುಗು,ಮಲಯಾಳಂ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೊಳ್ಳಲಿದೆ ಕೊರಗಜ್ಜ ಸಿನಿಮಾ 3 ವರ್ಷಗಳ ಹಿಂದೆ ಸೆಟ್ಟೇರಿತ್ತು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.


