ಮಂಗಳೂರು : ಜೋಡಿ ಕೊಲೆ ಆರೋಪಿ ಬಜಾಲ್ ಫೈಸಲ್ ನಗರದ ನಿವಾಸಿ ತುಕ್ಕ ನೌಫಾಲ್ (38) ಯಾನೆ ಟೋಪಿ ನೌಫಾಲ್ ನನ್ನು ಉಪ್ಪಳದಲ್ಲಿ ಭೀಕರವಾಗಿ ಕಡಿದು ಹತ್ಯೆಮಾಡಲಾಗಿದೆ.
ಉಪ್ಪಳ ರೈಲ್ವೆ ಗೇಟ್ ಬಳಿ ಇಂದು ಬೆಳಗ್ಗೆ 8:00 ಹೊತ್ತಿನಲ್ಲಿ ರಕ್ತದ ಮಡುವಿನಲ್ಲಿ ಮೇಲುಡುಪು ಶರ್ಟ್ ಇಲ್ಲದೆ ಈತನ ದೇಹ ಬಿದ್ದಿತ್ತು. ಮಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ನೌಫಲ್ ಡ್ರಗ್ಸ್ ಪ್ರಕರಣದಲ್ಲೂ ಸಕ್ರಿಯನಾಗಿದ್ದ. ಜಿಯಾ ಕೊಲೆ, ಡಬ್ಬಲ್ ಮರ್ಡರ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ಈತ ಯಾವುದಕ್ಕೂ ಹೇಸದ ವ್ಯಕ್ತಿಯಾಗಿದ್ದ.
ಮಂಗಳೂರು ಪೊಲೀಸ್ ಕಮಿಷನರ್ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡ ಬಳಿಕ ಈ ರೌಡಿ ಮಂಗಳೂರಿನ ಗಡಿ ಪ್ರದೇಶ ಕಾಸರಗೋಡು ಕಡೆಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಜಬ್ಬಾರ್ ಮತ್ತು ತಲ್ಲತ್ ಗ್ಯಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದ ಈತ ಕ್ರಮೇಣ ತನ್ನದೇ ಒಂದು ರೌಡಿ ಗುಂಪು ಕಟ್ಟಿಕೊಂಡಿದ್ದ.


