ಕೋಲಾರ : ಇತ್ತೀಚ್ಚಿಗೆ ಯಾವೆಲ್ಲ ಕಾರಣಕ್ಕೆ ಕೊಲೆ ನಡೆಯುತ್ತೆ ಎಂಬುದು ಗೊತ್ತಾಗಲ್ಲ,ಎಣ್ಣೆಗೆ ಸೈಡ್ಸ್ ನೀಡದಕ್ಕೆ ಹೆಂಡತಿ ಮಕ್ಕಳ ಎದುರಲ್ಲೇ ಚಾಕುವಿನಿಂದ ಚುಚ್ಚಿ ಬಾರ್ ಕ್ಯಾಶಿಯರ್ ನ್ನು ಯುವಕ ಕೊಂದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಲಕ್ಕೂರು ಗ್ರಾಮದಲ್ಲಿನಡೆದಿದೆ.
ಲಕ್ಕೂರು ಗ್ರಾಮದ ಅಶೋಕ ವೈನ್ಸ್ ಬಾರ್ ಕ್ಯಾಷಿಯರ್ ಹಾಸನ ಮೂಲದ ಕುಮಾರಸ್ವಾಮಿ (45) ಮೃತ ದುರ್ದೈವಿ .
ಸುಭಾಶ್ (30) ಕೊಲೆ ಮಾಡಿರುವ ಆರೋಪಿ.
ತಡರಾತ್ರಿ ಬಾರ್ ನಲ್ಲಿ ಮಿಕ್ಸಚರ್ ನೀಡದ ಹಿನ್ನೆಲೆ ಶುಭಾಶ್ ಕಿರಿಕ್ ಮಾಡಿದ್ದು ಬಾರ್ ಕ್ಲೋಸ್ ಮಾಡಿ ಮನೆಗೆ ತೆರಳುತ್ತಿದ್ದ ವೇಳೆ ಬಾರ್ ಕ್ಯಾಷಿಯರ್ ಕುಮಾರಸ್ವಾಮಿ ಮೇಲೆ ಮನೆ ಎದುರೆ ಹೆಂಡತಿ ಮಕ್ಕಳ ಮುಂದೆ ಮನಸೋ ಇಚ್ಛೆ ಚುಚ್ಚಿ ಕೊಲೆ ಮಾಡಿದ್ದಾನೆ. ಕೆಲವೇ ಗಂಟೆಗಳಲ್ಲಿ ಅರೋಪಿ ಸುಭಾಶ್ ನನ್ನು ಹೊಸಕೋಟೆಯಲ್ಲಿ ಬಂಧಿಸಿದ್ದು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


