ಮಂಗಳೂರು ; ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಚೀಫ್ ಮಿನಿಸ್ಟರ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ ಮಿಂಟನ್ ಕ್ರೀಡಾಕೂಟ,27 ಅಕ್ಟೋಬರ್ ನಿಂದ 2 ನವಂಬರ್ ವೆರೆಗೆ ನಡೆಯಲಿದೆ.
ಈ ಕ್ರೀಡಾಕೂಟಕ್ಕೆ 1 ಕೋಟಿ ಅನುದಾನ ಸರಕಾರ ನೀಡಿದ್ದು,ಈ ಕಾರ್ಯ ಕ್ರಮದ ಉಧ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನೆರೆವೆರೆಸಿಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರೋಗ್ಯ ಸಚಿವ ದಿನೇಶ್ ಗುಂಡ್ ರಾವ್ ರವರು ತಿಳಿಸಿದ್ದಾರೆ.
ಇದೊಂದು ಮಂಗಳೂರಿನ ಹೆಮ್ಮೆಯ ಕಾರ್ಯಕ್ರಮ ಇದಾಗಿದ್ದು ಇದು ಅಂತರಾಷ್ಟ್ರೀಯ ಮಾನ್ಯತೆ ಇರುವ ಟೂರ್ನಮೆಂಟ್ ಇದಾಗಿದೆ ಎಂದರು
40 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದೆ,ಒಟ್ಟು ೧೧ ಕೋರ್ಟ್ ಇದ್ದು 8 ಕೋರ್ಟನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.ಈ ಕ್ರೀಡಾಕೂಟಕ್ಕೆ ನಮ್ಮ ದೇಶದಿಂದ 350 ಸ್ಪರ್ಧಿಗಳು ಹಾಗೂ ಹೋರದೇಶದಿಂದ 100 ಮಂದಿ ಅಂತರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಪುತ್ತೂರು ಶಾಸಕ ಅಶೋಕ್ ರೈ,ಎಂ.ಎಲ್.ಸಿ ಐವನ್ ಡಿಸೋಜ,ಎಂಎಲ್.ಸಿ ಮಂಜುನಾಥ್ ಭಂಡಾರಿ, ದ.ಕ ಜಿಲ್ಲಾ ಬ್ಯಾಂಡ್ ಮಿಂಟನ್ ಎಶೋಶಿಯೆಷನ್ ಅಧ್ಯಕ್ಷ ಸಂತೋಷ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.