ಮೈಸೂರು : ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಕೊಳ್ಳೇಗಾಲದಲ್ಲಿಕೊಲೆ ಆರೋಪಿ ಪತ್ತೆಯಾಗಿದ್ದು ಮೈಸೂರಿಂದ ಖಾಸಗಿ ಬಸ್ ಮೂಲಕ ಆರೋಪಿ ತೆರಳಿದ್ದನು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕೊಳ್ಳೇಗಾಲದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಮೈಸೂರಿನ ಸಿದ್ದಲಿಂಗಪುರ ನಿವಾಸ ಆರೋಪಿ ಕಾರ್ತಿಕ್ ಎಂದು ತಿಳಿದಿದೆ.ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿ. ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ 4 ತಿಂಗಳ ಹಿಂದಷ್ಟೆ ಹೊರಬಂದಿದ್ದ. ಮಧ್ಯ ವ್ಯಸನಿಯಾಗಿದ್ದ ಕಾರ್ತಿಕ್ ಮೈಸೂರಿನ ಸಿದ್ದಲಿಂಗಪುರ ನಿವಾಸಿಯಾಗಿದ್ದನು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ವೇಳೆ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆಡಿದ್ದು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.


