ಚಿಕ್ಕಬಳ್ಳಾಪುರ : ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಶ್ರೀನಿವಾಸಸಾಗರ ಕೆರೆ ಮೈದುಂಬಿ ಕೋಡಿ ಹರಿಯುತ್ತಿದ್ದು, ಈ ನೀರಿನಲ್ಲಿ ಮಿಂದು ಸAಭ್ರಮಿಸಲು ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ನಡುವೆ ಯುವತಿಯರ ತಂಡವೊAದು ಕೋಡಿ ಹರಿಯುವ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ ದೇವರ ವಿಗ್ರಹದ ಮೇಲೆ ನಿಂತು, ನೀರಿನಲ್ಲಿ ಮೋಜು ಮಸ್ತಿ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇಬ್ಬರು ಯುವತಿಯರು, ಗಂಗಮ್ಮ ದೇವಿ ವಿಗ್ರಹದ ತಲೆಯ ಮೇಲೆ ಕಾಲುಗಳನ್ನಿಟ್ಟು ಜಲಾಶಯದ ತಡೆಗೋಡೆಗೆ ಮೈಯೊಡ್ಡಿ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ದುರ್ವತನೆ ತೋರಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಜಲಾಶಯದ ಬಳಿ ಕೆಲವರು ಮದ್ಯ ಸೇವಿಸಿ ಅಸಭ್ಯ ವರ್ತನೆ ತೋರುವುದೂ ಇದೆ. ಗಂಗಮ್ಮ ವಿಗ್ರಹದ ಮೇಲೆ ನಿಂತು ಸ್ನಾನ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಿAದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಬಂದಿದೆ ಎಂದು ಕಿಡಿಕಾರಿದ್ದಾರೆ. ಇದುವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.