Monday, October 20, 2025
Flats for sale
Homeರಾಜ್ಯತುಮಕೂರು : ಮಾರ್ಕೋನಹಳ್ಳಿ ಡ್ಯಾಂ‌ನ ನೀರಿನಲ್ಲಿ ಕೊಚ್ಚಿಹೋದ 7 ಮಂದಿ,ಓರ್ವನ ರಕ್ಷಣೆ,ಇಬ್ಬರ ಮೃತದೇಹ ಪತ್ತೆ..!

ತುಮಕೂರು : ಮಾರ್ಕೋನಹಳ್ಳಿ ಡ್ಯಾಂ‌ನ ನೀರಿನಲ್ಲಿ ಕೊಚ್ಚಿಹೋದ 7 ಮಂದಿ,ಓರ್ವನ ರಕ್ಷಣೆ,ಇಬ್ಬರ ಮೃತದೇಹ ಪತ್ತೆ..!

ತುಮಕೂರು : ಮಾರ್ಕೋನಹಳ್ಳಿ ಡ್ಯಾಂ‌ನ ಕೋಡಿಯಲ್ಲಿ 7 ಮಂದಿ ಕೊಚ್ಚಿ ಹೋದ ಘಟನೆ ನಿನ್ನೆ ನಡೆದಿದೆ.ನೀರಿನ ರಭಸಕ್ಕೆ ನೀರಿನಲ್ಲಿ ಆಟ ಆಡ್ತಿದ್ದಂತಹ 7 ಮಂದಿ ಕೊಚ್ಚಿ ಹೋಗಿದ್ದು ಅದರಲ್ಲಿ ಓರ್ವನ ರಕ್ಷಣೆ ಮಾಡಲಾಗಿದ್ದು ಇಬ್ಬರ ಮೃತದೇಹ ದೊರೆತಿದೆ.ಜಲಾಶಯದಲ್ಲಿ ಮುಳುಗಿ ಸಾಜಿಯಾ, ಅರ್ಬಿನ್ ಸಾವನ್ನಪ್ಪಿದ್ದಾರೆ. ಇನ್ನು ಕಣ್ಮರೆಯಾಗಿರುವ ತಬಾಸುಮ್, ಶಬಾನ, ಮಿಫ್ರಾ, ಮಹಿಬ್​ ಗಾಗಿ ಶೋಧ ಕಾರ್ಯ ನಡೆದಿದೆ.

ಮೃತರೆಲ್ಲರೂ ತುಮಕೂರು ಜಿಲ್ಲೆಯವರು ಆಗಿದ್ದು ಕುಣಿಗಲ್‌ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿದ್ದು, ಊಟ ಮುಗಿಸಿಕೊಂಡು ಜಲಾಶಯಕ್ಕೆ ಹೋಗಿದ್ದರು. ಹಿನ್ನೀರಿನ ಕಾಲುವೆಗೆ ಇಳಿಯುತ್ತಿದ್ದಂತೆಯೇ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಪೈಕಿ ಒಬ್ಬರನ್ನ ರಕ್ಷಣೆ ಮಾಡಿ, ಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ ಅಲ್ಲದೆ ಮೃತ ದೇಹಗಳನ್ನೂ ಕೂಡ ಚುಂಚನಗಿರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತುಮಕೂರು ಎಸ್ಪಿ ಅಶೋಕ್ ವೆಂಕಟ್ ತಿಳಿಸಿದ್ದಾರೆ.

ಇಂದು ಮೃತ ದೇಹಗಳ ಶೋಧ ಕಾರ್ಯ ಮುಂದುವರಿಡಿದ್ದು ನಾಲ್ಕು ವರ್ಷದ ಮಗು ಮಿಫ್ರಾ ಮೃತ ದೇಹ ಪತ್ತೆಯಾಗಿದೆ.ಸಾಜಿಯಾ, ಅರ್ಬಿನ್ ಮೃತರು. ತಬಾಸುಮ್ (45), ಶಬಾನ (44), ಮಿಫ್ರಾ (4) ಹಾಗೂ ಮಹಿಬ್ (1) ಕಣ್ಮರೆಯಾದವರು. ಘಟನೆ ಮಂಡ್ಯ ಜಿಲ್ಲೆ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಎರಡು ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular