ಮುಂಬೈ : ಮದ್ಯದಂಗಡಿಗಳು ಹಾಗೂ ಲಿಕ್ಕರ್ ಶಾಪ್‌ಗಳನ್ನು ಹೊರತುಪಡಿಸಿ, ಉಳಿದಂತೆ ಅಂಗಡಿ ಮುಂಗಟ್ಟುಗಳು, ಹೋಟೆಲ್, ರೆಸ್ಟೊರೆಂಟ್, ಮಾಲ್‌ಗಳು, ವಾಣಿಜ್ಯ ಮತ್ತಿತರ ಎಲ್ಲ ವ್ಯಾಪಾರ ವಹಿವಾಟನ್ನು ದಿನದ 24 ಗಂಟೆಯೂ ನಡೆಸಲು ಅವಕಾಶ ನೀಡುವ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಹೊರಡಿಸಿದೆ.
ಮಹಾರಾಷ್ಟç ಕೈಗಾರಿಕಾ ಸಚಿವಾಲಯದಿಂದ ಬುಧವಾರ ಹೊರಡಿಸಲಾದ ಹೊಸ ಸುತ್ತೋಲೆಯಲ್ಲಿ ಈ ವಿಷಯ ಖಚಿತಪಡಿಸಲಾಗಿದೆ. ರಾತ್ರಿ ವೇಳೆ ವ್ಯಾಪಾರ ನಡೆಸಲು ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ನಿರ್ಬಂಧ ಹೇರುತ್ತಿವೆ ಎಂದು ವ್ಯಾಪಾರಿಗಳು ನಿರಂತರ ದೂರುಗಳನ್ನು ನೀಡಿದ್ದರ ಪರಿಣಾಮವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ ಸುತ್ತೋಲೆ ಪ್ರಕಾರ, ಲಿಕ್ಕರ್ ಶಾಪ್‌ಗಳು ಹಾಗೂ ಮದ್ಯದಂಗಡಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ದಿನದ ೨೪ ಗಂಟೆ ವ್ಯಾಪಾರ ಮಾಡಲು ಅನೇಕ ಅಡೆತಡೆಗಳು ಹಾಗೂ ಅಡ್ಡಿ ಆತಂಕಗಳು ಇರುವ ಕಾರಣ ಇವುಗಳನ್ನು ಆದೇಶದಿಂದ ಹೊರಗಿಡಲಾಗಿದೆ.
ಅಂಗಡಿ ಮುಂಗಟ್ಟು, ಹೋಟೆಲ್,ರೆಸ್ಟೋರೆಂಟ್‌ಗಳು ದಿನಪೂರ್ತಿ ತೆರೆದು ವಹಿವಾಟು ನಡೆಸಬಹುದು.ಉದ್ಯಮಸ್ನೇಹಿ ನಿರ್ಧಾರ ಕೈಗೊಂಡು ಮಹಾರಾಷ್ಟ್ರ ಸರ್ಕಾರದ ಆದೇಶ ಹೊರಡಿಸಿದೆ.ಮದ್ಯದ ಅಂಗಡಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಈಗಿನ ವೇಳಾ ಮಿತಿಯೇ ಮುಂದುವರಿಯಲಿದೆ.