Monday, July 6, 2026
Homeಜಿಲ್ಲೆಸುಳ್ಯ: ಸುಳ್ಯದಲ್ಲಿ ಕಾಡಾನೆ ಮತ್ತೆ ಪ್ರತ್ಯಕ್ಷ , ಭಯಭೀತರಾದ ಸ್ಥಳೀಯರು.

ಸುಳ್ಯ: ಸುಳ್ಯದಲ್ಲಿ ಕಾಡಾನೆ ಮತ್ತೆ ಪ್ರತ್ಯಕ್ಷ , ಭಯಭೀತರಾದ ಸ್ಥಳೀಯರು.

ಸುಳ್ಯ ; ತಾಲೂಕಿನ ಕೊಲ್ಲಮೊಗ್ರು ಸಮೀಪದ ಕಟ್ಟಾ ಕ್ರಾಸ್‌ನಲ್ಲಿ ಮಾ.4ರ ಶನಿವಾರ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ.

ಆಟೊ ಚಾಲಕ ದಯಾನಂದ ಪರಮಲೆ ತನ್ನ ವಾಹನವನ್ನು ಚಲಾಯಿಸುತ್ತಿದ್ದ ವೇಳೆ ಕಾಡಾನೆಯು ರಸ್ತೆ ದಾಟಿ ಕಾಡಿನೊಳಗೆ ಹೋಗಿತ್ತು. ಕೆಲವು ದಿನಗಳ ಹಿಂದೆಯೂ ಇದೇ ಸ್ಥಳದಲ್ಲಿ ಆನೆ ಕಾಣಿಸಿಕೊಂಡಿತ್ತು.

ಆನೆಯು ರಸ್ತೆ ದಾಟಿ ಕಂತುಕುಮೇರಿ ಬಾಳಗೋಡು ಭಾಗದ ಕಡೆಗೆ ಹೋಗಿರುವ ಸಾಧ್ಯತೆ ಇದೆ. ಕಟ್ಟಾ ಗೋವಿಂದನಗರ, ಕೊಲ್ಲಮೊಗ್ರು, ಕಲ್ಮಕಾರು, ಬಾಳಗೋಡು, ಐನಕಿಡು ಪ್ರದೇಶಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಆನೆ ಕಾಣಿಸಿಕೊಂಡಿದೆ. ಈ ಪ್ರದೇಶಗಳ ನಿವಾಸಿಗಳು ತಮ್ಮ ಮನೆಗಳೊಳಗಿದ್ದರೂ ಭಯದಿಂದಲೇ ಜೀವನ ನಡೆಸುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular