Thursday, September 18, 2025
Flats for sale
Homeಜಿಲ್ಲೆಮಂಗಳೂರು ; ಮಂಗಳೂರಿನ ಖ್ಯಾತ ಉದ್ಯಮಿ,ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ನ ಮಾಲಕ ಪ್ರಭಾಕರ ಪೂಂಜಾ...

ಮಂಗಳೂರು ; ಮಂಗಳೂರಿನ ಖ್ಯಾತ ಉದ್ಯಮಿ,ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ನ ಮಾಲಕ ಪ್ರಭಾಕರ ಪೂಂಜಾ ನಿಧನ….!!

ಮಂಗಳೂರು : ಮಂಗಳೂರು ಎಂದರೆ ಒಂದು ಕಾಲದಲ್ಲಿ ರೌಡಿಸಂ ,ಹೋಟೆಲ್ ಉದ್ಯಮ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಪ್ರಸಿದ್ಧ.ಅದರಂತೆಯೆ ಮಂಗಳೂರನ್ನು ಅದೆಷ್ಟೋ ಜನ ಆಳೆದು ಹೋಗಿದ್ದಾರೆ ಅಂತಹದರಲ್ಲಿ ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ ಕೂಡ ಒಬ್ಬರು.

ಒಂದು ಕಾಲದಲ್ಲಿ ಮಂಗಳೂರಿನ ಹೆಸರಾಂತ ಹೊಟೇಲ್ ಪೂಂಜಾ ಇಂಟರ್ನ್ಯಾಶನಲ್ ಇದರ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ(72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮುಂಬೈ ಭೂಗತ ಲೋಕಕ್ಕೆ ಮಂಗಳೂರು ಸನಿಹ ಇತ್ತು ಅದರಂತೆಯೇ 40 ವರ್ಷಗಳ ಹಿಂದೆ ಮುಂಬೈನಲ್ಲಿ ಭೂಗತ ಜಗತ್ತಿನ ಸಂಪರ್ಕದಲ್ಲಿದ್ದ ಪ್ರಭಾಕರ ಪೂಂಜಾ ಅಲ್ಲಿನ ಒಬ್ಬ ಡಾನ್ ಗೆ ಕಾರು ಚಾಲಕನಾಗಿದ್ದರು.ಬಳಿಕ ಮಂಗಳೂರಿಗೆ ಬಂದು 1986ರಲ್ಲಿ ಮಂಗಳೂರಿಗೆ ಬಂದು ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ನಿರ್ಮಾಣ ಮಾಡಿದ್ದರು.ಆ ಸಮಯದಲ್ಲಿ ಐಷಾರಾಮಿ ಹೋಟೆಲ್ ಅಂದರೆ ಮೋತಿಮಹಲ್ ಬಿಟ್ಟರೆ ಪೂಂಜಾ ಇಂಟರ್ ನ್ಯಾಷನಲ್ ಆಗಿತ್ತು. ಭೂಗತ ಜಗತ್ತಿನಲ್ಲಿ ಡಾನ್ ಆಗಿದ್ದ ಶರದ್ ಶೆಟ್ಟಿ ಇವರ ಖಾಸಾ ಭಾವನಾಗಿದ್ದು, ಅದೇ ನಂಟಿನಲ್ಲಿ ಮಂಗಳೂರಿನಲ್ಲಿ ಹೊಟೇಲ್ ವ್ಯವಹಾರ ಆರಂಭಿಸಿದ್ದರು. ಮಂಗಳೂರಿಗೆ ಬಂದ ಬಳಿಕವೇ ಅವರಿಗೆ ಮದುವೆಯಾಗಿತ್ತು ಎಂದು ಅವರ ಬಗ್ಗೆ ತಿಳಿದವರು ಹೇಳುತ್ತಾರೆ. ಅವರ ಮಕ್ಕಳು ಈಗ ಹೊಟೇಲ್ ನೋಡಿಕೊಳ್ಳುತ್ತಿದ್ದರು ಇದೀಗ ಕಾಲಕ್ಕೆ ತಕ್ಕಂತೆ ಮಂಗಳೂರಿನಲ್ಲಿ ಭೂಗತ ಜಗತ್ತಿನ ಅಂತ್ಯಕಂಡಿದೆ.

.

RELATED ARTICLES

LEAVE A REPLY

Please enter your comment!
Please enter your name here

Most Popular